ಒಬ್ಬ ಬಾಲಕ, ಒಂದು ಲೈಟರ್ ಹಾಗೂ ಒಂದು ಮಿಲಿಯನ್ ಡಾಲರ್ ಆಹುತಿ!

Update: 2016-09-25 10:32 GMT

ಮಕ್ಕಳ ಸ್ಕೂಟರಲ್ಲಿ ಅತ್ತಿತ್ತ ಸಾಗುತ್ತಿದ್ದ 12 ವರ್ಷದ ಬಾಲಕ ದಕ್ಷಿಣ ಕ್ಯಾಲಿಫೋರ್ನಿಯ ಮರುಭೂಮಿಯ ವಾಲ್ ಮಾರ್ಟ್ ಮಳಿಗೆಯೊಂದರ ಕಲೆ ಮತ್ತು ಶಿಲ್ಪಕಲೆ ವಿಭಾಗಕ್ಕೆ ಬೆಂಕಿ ಇಟ್ಟ ಕಾರಣ 1 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬರ್ಸ್ಟಾವ್‌ನಲ್ಲಿರುವ ಈ ಮಳಿಗೆಗೆ ಆಗಿರುವ ಹಾನಿಯಿಂದಾಗಿ ಅದನ್ನು ಮೂರನೇ ದಿನವೂ ಮುಚ್ಚಲಾಗಿತ್ತು. ತನ್ನ ಹೆತ್ತವರ ಜೊತೆಗೆ ಬಂದಿರದ ಬಾಲಕ ಲೈಟರ್ ಹಿಡಿದು ವಸ್ತುಗಳಿಗೆ ಬೆಂಕಿ ಇಟ್ಟಿದ್ದ. ವಾಲ್ ಮಾರ್ಟ್ ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನಿಸಿದರೂ ಅಗ್ನಿ ನಿರೋಧಕ ವಸ್ತುಗಳು ಕೆಲಸ ಮಾಡಿರಲಿಲ್ಲ. ಹೀಗಾಗಿ ಕೆಲವರು ಹೊಗೆಯಲ್ಲಿ ಸಿಕ್ಕಿಕೊಂಡು ಕಷ್ಟಪಟ್ಟರು.

ಅಗ್ನಿ ನಿರೋಧಕ ದಳ ಬಂದು ಕೊನೆಗೆ ಬೆಂಕಿಯನ್ನೇನೋ ಆರಿಸಿದರಾದರೂ ಅಗ್ನಿ ಮತ್ತು ನೀರು ಎರಡರಿಂದಲೂ ತೀವ್ರ ಹಾನಿ ಸಂಭವಿಸಿದೆ. ಸಿಸಿಟಿವಿ ವೀಡಿಯ ದೃಶ್ಯ ನೋಡಿದ ಪೊಲೀಸರು ಹುಡುಗ ಸ್ಕೂಟರ್‌ನಲ್ಲಿ ಬೆನ್ನಿಗೆ ಬ್ಯಾಗ್ ಸಿಕ್ಕಿಸಿ ಸಾಗುತ್ತಿದ್ದುದನ್ನು ಕಂಡಿದ್ದಾರೆ. ನಂತರ ರಸ್ತೆಬದಿ ಸಿಕ್ಕ ಬಾಲಕನನ್ನು ಬಂಧಿಸಲಾಗಿದ್ದು, ಜ್ಯುವೆಲಿನ್ ಹಾಲ್‌ಗೆ ಕಳುಹಿಸಲಾಗಿದೆ.

ಕೃಪೆ: http://khaleejtimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News