ಬಾಲಕಿಯ ಚಿಕಿತ್ಸೆಗೆ ನೆರವಿಗೆ ಮನವಿ
ಮಂಜೇಶ್ವರ, ಸೆ.25: ಕುಂಜತ್ತೂರಿನ ಉಮರ್- ಅಸ್ಮಾ ದಂಪತಿಯ ಪುತ್ರಿ ಸಫಾ ಎಂಬ ಬಾಲಕಿಯು ಆಟವಾಡುತ್ತಿದ್ದ ವೇಳೆ ಮನೆಯ ತಾರಸಿಯಿಂದ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತೀರಾ ಬಡತನದಲ್ಲಿರುವ ಈ ಕುಟುಂಬ ಘಟನೆಯಿಂದ ಕಂಗಾಲಾಗಿದ್ದು, ಸಹಾಯದ ನಿರೀಕ್ಷೆಯಲ್ಲಿದೆ.
ಯುನಿವೆಫ್ ಕರ್ನಾಟಕದ ಸಮಾಜ ಸೇವಾ ಘಟಕವು ಬಾಲಕಿಯ ಪೋಷಕರ ಮನವಿಗೆ ಸ್ಪಂದಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ತುರ್ತಾಗಿ ಆರ್ಥಿಕ ಸಹಾಯವನ್ನು ನೀಡಿದೆ. ಹಾಗೂ ಹೆಚ್ಚಿನ ಸಹಾಯದ ಭರವಸೆಯನ್ನೂ ನೀಡಿದೆ. ಚಿಕಿತ್ಸೆಯ ವೆಚ್ಚವು ಲಕ್ಷಗಳನ್ನು ಮೀರುವ ಸಾಧ್ಯತೆಗಳಿವೆ. ಸಹಾಯ ನೀಡಬಯಸುವವರು ಉಮರ್ (ಬಾಲಕಿಯ ತಂದೆ) ಮೊ.ಸಂ.: 09895734983ನ್ನು ಸಂಪರ್ಕಿಸಬಹುದು. ಅಥವಾ ಈ ಕೆಳಗಿನ ಬ್ಯಾಂಕ್ ಖಾತೆಗೂ ಜಮಾ ಮಾಡಬಹುದು.
ಖಾತೆ ವಿವರ
ಅಸ್ಮಾ ಎಂ. (ಬಾಲಕಿಯ ತಾಯಿ)
ಖಾತೆ ಸಂಖ್ಯೆ: 40459100007510
IFSC: KLGB: 0040459
ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್
ಮಾಡ, ಕುಂಜತ್ತೂರು ಶಾಖೆ, ಕೇರಳ
ನೇರವಾಗಿ ಸಹಾಯ ಮಾಡಲು ಸಾಧ್ಯವಾಗದ ಮಂದಿ ಯುನಿವೆಫ್ ಮುಖಾಂತರವೂ ಸಹಾಯ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಹನೀಫ್ ಕುದ್ರೋಳಿ, ಸಂಚಾಲಕರು, ಸಮಾಜ ಸೇವಾ ವಿಭಾಗ, ಯುನಿವೆಫ್ ಕರ್ನಾಟಕ ಮೊ.ಸಂ.: 9845328090ನ್ನು ಸಂಪರ್ಕಿಸಬಹುದು ಎಂದು ಯುನಿವೆಫ್ ಪ್ರಕಟನೆಯಲ್ಲಿ ತಿಳಿಸಿದೆ.