ಸುಳ್ಯದಿಂದ ಕೇರಳ ಸಂಪರ್ಕಕ್ಕೆ ಮತ್ತೊಂದು ಹೆಜ್ಜೆ
ಸುಳ್ಯ, ಸೆ.25: ಸುಳ್ಯವನ್ನು ರಸ್ತೆ ಮಾರ್ಗ ಮೂಲಕ ಕೇರಳಕ್ಕೆ ಸಂಪರ್ಕಿಸುವ ಮತ್ತೊಂದು ಯಶಸ್ವಿ ಕಾರ್ಯ ನಡೆದಿದ್ದು ಕಾಞಂಗಾಡ್‌ನಿಂದ ಸುಳ್ಯಕ್ಕೆ ಐದು ಕೇರಳ ಸರಕಾರಿ ಬಸ್‌ಗಳ ಓಡಾಟ ಆರಂಗೊಂಡಿದೆ.
ಸುಳ್ಯ ಆಲೆಟ್ಟಿ, ಬಡ್ಡಡ್ಕ, ಕಲ್ಲಪಳ್ಳಿ, ಪಾಣತ್ತೂರು ಮೂಲಕ ಕಾಸರಗೋಡು ಜಿಲ್ಲೆಯ ಪ್ರಧಾನ ನಗರವಾದ ಕಾಞಂಗಾಡ್ ಸಂಪರ್ಕ ರಸ್ತೆ ಇದ್ದು ಸುಳ್ಯದಿಂದ ಕಾಞಂಗಾಡ್, ಕಣ್ಣೂರು ಭಾಗಕ್ಕೆ ತೆರಳುವವರು ಈ ಮಾರ್ಗವನ್ನು ಅವಲಂಬಿಸುತ್ತಿದ್ದರು. ಕೇರಳ ರಾಜ್ಯ ವ್ಯಾಪ್ತಿಗೆ ಸೇರಿದ ಭಾಗದಲ್ಲಿ ರಸ್ತೆ ವ್ಯವಸ್ಥಿತವಾಗಿದ್ದು ಕರ್ನಾಟಕಕ್ಕೆ ಸೇರಿದ ವ್ಯಾಪ್ತಿಯಲ್ಲಿ ರಸ್ತೆ ಕೆಲವು ಭಾಗದಲ್ಲಿ ನಾದುರಸ್ತಿಯಲ್ಲಿತ್ತು. ಈ ರಸ್ತೆಯಲ್ಲಿ ಸುಳ್ಯದಿಂದ ಪಾಣತ್ತೂರುವರೆಗೆ ಜೀಪ್‌ಗಳು ಓಡಾಡುತ್ತಿದ್ದವು. ಎರಡು ವರ್ಷದ ಹಿಂದೆ ಖಾಸಗಿ ಬಸ್ ಈ ಮಾರ್ಗವಾಗಿ ಚೆತ್ತುಕಯದವರೆಗೆ ಸಂಚಾರ ನಡೆಸುತ್ತಿತ್ತು. ಈ ಮಾರ್ಗದಲ್ಲಿ ಕೆಲವು ಸಮಯದ ಹಿಂದೆ ಕೇರಳ ಕೆಎಸ್ಸಾರ್ಟಿಸಿಯ ಐದು ಸರಕಾರಿ ಬಸ್‌ಗಳಿಗೆ ಓಡಾಟದ ಪರವಾನಿಗೆ ದೊರೆತಿತ್ತು. ಆದರೆ ರಸ್ತೆ ನಾದುರಸ್ತಿಯ ಹಿನ್ನಲೆಯಲ್ಲಿ ಬಸ್‌ಗಳ ಓಡಾಟ ಆರಂವಾಗಿರಲಿಲ್ಲ. ಹೀಗಾಗಿ ಪಾಣತ್ತೂರು ಭಾಗದಲ್ಲಿ ಆಕ್ರೋಶದ ದನಿಗಳು ಮೊಳಗಿತ್ತು.
ಧರಣಿ ಸತ್ಯಾಗ್ರಹವನ್ನೂ ಘೋಷಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತ ಸರಕಾರದ ಅಧಿಕಾರಿಗಳು ಮಾರ್ಗದಲ್ಲಿ ಸರ್ವೆ ನಡೆಸಿ ಬಸ್ ಆರಂಭದ ದಿನಾಂಕ ಮತ್ತು ಸಮಯವನ್ನು ನಿಗದಿ ಪಡಿಸಿದರು. ಅದರಂತೆ ರವಿವಾರ ಎರಡು ಬಸ್‌ಗಳ ಸಂಚಾರ ಆರಂಭವಾಗಿದ್ದು ಸೋಮವಾರದಿಂದ ಐದು ಬಸ್ ಸಂಚಾರ ನಡೆಯಲಿದೆ. ರವಿವಾರ ಬೆಳಗ್ಗೆ ಪಾಣತ್ತೂರಿನಲ್ಲಿ ಉದ್ಘಾಟನಾ ಸಮಾರಂಭ ನಡೆದ ಬಳಿಕ ಕಲ್ಲಪಳ್ಳಿಯಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ಬಳಿಕ ಏಕ ಕಾಲದಲ್ಲಿ ಎರಡು ಬಸ್‌ಗಳು ಸುಳ್ಯ ಬಸ್ ನಿಲ್ದಾಣ ಪ್ರವೇಶಿಸಿದವು. ಎರಡು ಬಸ್‌ಗಳಲ್ಲಿ ಪಾಣತ್ತೂರು, ಪನತ್ತಡಿ ಭಾಗದಿಂದ ಜನಪ್ರತಿನಿಧಿಗಳು, ವಿವಿದ ರಾಜಕೀಯ ಪಕ್ಷಗಳ ಮುಖಂಡರು, ಊರವರು ಆಗಮಿಸಿದ್ದರು.
ಸುಳ್ಯದಲ್ಲಿ ವರ್ತಕರ ಸಂಘ, ರೋಟರಿ ಕ್ಲಬ್, ರೋಟರಿ ಸಿಟಿ ಹಾಗೂ ಊರವರ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆಯಿತು. ಸುಳ್ಯ ವರ್ತಕರ ಸಂಘದ ಅದ್ಯಕ್ಷ ಸುಧಾಕರ ರೈ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಪನತ್ತಡಿ ಪಂಚಾಯತ್ ಅಧ್ಯಕ್ಷ ಕೆ.ಜಿ. ಮೋಹನನ್ ಮಾತನಾಡಿ ಈ ಬಸ ಆರಂವಾಗಿರುವುದು ಉಯ ರಾಜ್ಯಗಳ ಸಂಂಧ ವೃದ್ದಿಯಾಗಲು ಸಹಕಾರಿ ಎಂದರು. ಸದಸ್ಯ ಅರುಣ್ ರಂಗತ್ತಮಲೆ, ಸಾಮಾಜಿಕ ಧುರೀಣ ಸೂರ್ಯ ಭಟ್, ರೋಟರಿ ಕ್ಲಬ್ ಅಧ್ಯಕ್ಷ ಗಿರಿಜಾ ಶಂಕರ ತುದಿಯಡ್ಕ ಮೊದಲಾದವರು ಮಾತನಾಡಿದರು.
ರೋಟರಿ ಸಿಟಿ ಅಧ್ಯಕ್ಷ ಪ್ರಮೋದ್ ನಾಯರ್, ನಗರ ಪಂಚಾಯತ್ ಸದಸ್ಯ ಕೆ. ಗೋಕುಲ್‌ದಾಸ್, ರಾಮಚಂದ್ರ ಆಗ್ರೋ, ಎ.ಎಂ. ಟ್, ಅವೀನ್ ರಂಗತ್ತಮಲೆ, ಗಣೇಶ ಭಟ್, ಎ.ಸಿ ನಂದನ್, ಜಗನ್ನಾಥ ರೈ, ರವೀಂದ್ರನಾಥ ರೈ, ಪ್ರಿಯರಂಜನ್ ನಾಯರ್, ಕಾಞಂಗಾಡಿನ ನ್ಯಾಯವಾದಿ ಮೋಹನ್‌ಕುಮಾರ್, ಕೆ.ಕೆ. ಕುಂಞರಾಮನ್, ರಾಧಕೃಷ್ಣ ಕಲ್ಲಪಳ್ಳಿ, ಕೇರಳ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಾದ ಥೋಮಸ್, ಸುಳ್ಯದ ಸಂಚಾರಿ ನಿಯಂತ್ರಕ ಹರೀಶ್ಚಂದ್ರ ಮೇಲಡ್ತಲೆ ಮೊದಲಾದವರು ಈ ಸಂದರ್ದಲ್ಲಿ ಉಪಸ್ಥಿತರಿದ್ದರು.
ಈ ಸರಕಾರಿ ಬಸ್‌ಗಳು ಸುಳ್ಯದಿಂದ ಬೆಳಗ್ಗೆ 5:40, 8:00, 10:05 ಹಾಗೂ ಸಂಜೆ 4:15, 5:20 ಮತ್ತು 6:45ಕ್ಕೆ ಕಾಞಂಗಾಡಿಗೆ ಹೊರಡಲಿದೆ. ಪಾಣತ್ತೂರಿನಿಂದ ಸುಳ್ಯಕ್ಕೆ ಬಸ್ ಹೊರಡುವ ಸಮಯ ಬೆಳಗ್ಗೆ 7:10, 9:10, ಅಪರಾಹ್ನ 2:50, 4:10, 5:50 ಮತ್ತು 6:40