×
Ad

ಮೊದಲು ಭಾರತದಲ್ಲಿರುವ ಮಿನಿ ಪಾಕಿಸ್ತಾನಗಳನ್ನು ನಿವಾರಿಸಬೇಕಿದೆ: ತೊಗಾಡಿಯ

Update: 2016-09-25 17:08 IST

ಮುರಾದಾಬಾದ್, ಸೆಪ್ಟಂಬರ್ 25: ಉತ್ತರಪ್ರದೇಶದ ಮುರಾದಾಬಾದ್‌ನಲ್ಲಿ ವಿಹಿಂಪದ ನಾಯಕ ತೊಗಾಡಿಯ ಪಾಕಿಸ್ತಾನವನ್ನು ತರಾಟೆಗೆತ್ತಿಕೊಳ್ಳುತ್ತಾ ಭಾರತದಲ್ಲಿಯೂ ಅಲ್ಲಲ್ಲಿ ಮಿನಿಪಾಕಿಸ್ತಾನಗಳಿವೆ ಮೊದಲು ಅವುಗಳನ್ನು ನಿವಾರಿಸಬೇಕೆಂದು ಹೇಳಿರುವುದಾಗಿ ವರದಿಯಾಗಿದೆ. "ಭಾರತ ಸರಕಾರ ಪಾಕಿಸ್ತಾನಕ್ಕೆ ಅದರ ಭಾಷೆಯಲ್ಲಿಯೇ ಉತ್ತರ ಕೊಡಬೇಕು, ಯಾವ ದೇಶದಲ್ಲಿ ಸೇನೆ ಸುರಕ್ಷಿತವಾಗಿರುವುದಿಲ್ಲವೋ ಆ ದೇಶದಲ್ಲಿ ನಾಗರಿಕರೂ ಸುರಕ್ಷಿತವಲ್ಲ" ಎಂದು ಗುಡುಗಿದ್ದಾರೆ.

ಸದ್ಯಕ್ಕೆ ಭಾರತದಿಂದ ಹರಿಯುತ್ತಿರುವ ಸಿಂಧೂ, ಝೇಲಮ್ ಮತ್ತು ಚಿನಾಬ್ ನದಿಯ ನೀರು ಪಾಕಿಸ್ತಾನಕ್ಕೆ ಹೋಗದಂತೆ ತಡೆಯಬೇಕು. ಭಯೋತ್ಪಾದನೆಯ ವಿರುದ್ಧ ನಮ್ಮ ನೀತಿ ಕೂಡಾ ಇಸ್ರೇಲಿನ ನೀತಿಯಂತಿರಬೇಕೆಂದು ತೊಗಾಡಿಯ ಹೇಳಿದ್ದಾರೆ.

ಭಾರತದಲ್ಲಿ ಅಲ್ಲಲ್ಲಿ ಮಿನಿಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ. ಮೊದಲು ದೇಶದಲ್ಲಿ ಕುಳಿತಿರುವ ಪಾಕಿಸ್ತಾನಿಯರನ್ನು ಮತ್ತು ಅವರ ಬೆಂಬಲಿಗರನ್ನು ನಿವಾರಿಸಿಕೊಳ್ಳಬೇಕು. ಇನ್ನು ದೇಶದಲ್ಲಿ ಹಿಂದೂಗಳ ಪಲಾಯನ ಆಗುವುದಿಲ್ಲ ಪರಾಕ್ರಮ ಆಗಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಉರಿ ದಾಳಿಯಲ್ಲಿ ಮೃತರಾದ ಭಯೋತ್ಪಾದಕರ ಶವಗಳನ್ನು ಸಾರ್ವಜನಿಕರ ಮುಂದೆ ಕಸದ ರಾಶಿಯಲ್ಲಿ ಹಾಕಿಸುಟ್ಟು ಪಾಠ ಕಲಿಸಬೇಕು. ಸ್ವರ್ಗಸಂಪಾದಿಸಲಿಕ್ಕಾಗಿ ಈ ಭಯೋತ್ಪಾದಕರು ನಮ್ಮ ಸೈನಿಕರ ಮೇಲೆ ದಾಳಿಗೆ ಬಂದಿದ್ದಾರೆ. ಆದ್ದರಿಂದ ಮೃತ ಭಯೋತ್ಪಾದಕರ ಶವಗಳನ್ನು ಕಸದರಾಶಿಯಲ್ಲಿ ಹಾಕಿ ಸಾರ್ವಜನಿಕರ ಮುಂದೆ ಸುಟ್ಟುಹಾಕಬೇಕು, ಯಾಕೆಂದರೆ ಸ್ವರ್ಗದ ಬದಲಿಗೆ ನರಕಕ್ಕೆ ಹೋಗುವಂತಾಗಬೇಕೆಂದು ತಾನು ಆಗ್ರಹಿಸುತ್ತೇನೆಂದು ತೊಗಾಡಿಯ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News