ಕಾಸರಗೋಡು: ಕಾರಿಗೆ ಲಾರಿ ಢಿಕ್ಕಿ; ಓರ್ವ ಮೃತ್ಯು
Update: 2016-09-25 17:13 IST
ಕಾಸರಗೋಡು, ಸೆ.25: ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಎರಿಯಾಲ್‌ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಮೊಗ್ರಾಲ್ ಪಟೇಲ್ ರಸ್ತೆ ಬಳಿಯ ನಿವಾಸಿ ಎಂ.ಕೆ. ಮಾಹಿನ್ (57) ಎಂದು ಗುರುತಿಸಲಾಗಿದೆ.
ಕಾಸರಗೋಡು ಖಾಸಗಿ ಆಸ್ಪತ್ರೆಯ ಮೆಡಿಕಲ್ ಶಾಪ್‌ನ ಪಾಲುದಾರರಾಗಿದ್ದ ಮಾಹಿನ್ ತನ್ನ ಕಾರಿನಲ್ಲಿ ಕಾಸರಗೋಡಿಗೆ ತೆರಳುತ್ತಿದ್ದಾಗ ಕುಂಬಳೆ ಕಡೆಗೆ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಮಾಹಿನ್‌ರನ್ನು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟರು.
ಮಾಹಿನ್‌ರ ಪುತ್ರ ಹಸನ್ ನೈಮುದ್ದೀನ್ ಕೆಲ ವರ್ಷಗಳ ಹಿಂದೆ ಮೇಲ್ಪರಂಬದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಕಾಸರಗೋಡು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.