×
Ad

ಚಾಂಪಿಯನ್ಸ್ ಟ್ರೋಫಿ: ನಿರ್ಧಾರ ಬದಲಿಸಿದ ಬಿಸಿಸಿಐ

Update: 2016-09-25 17:31 IST

ತಿರುವನಂತಪುರಂ,ಸೆಪ್ಟಂಬರ್ 25: ಪಾಕಿಸ್ತಾನದೊಂದಿಗೆ ಇನ್ನು ಕ್ರಿಕೆಟ್ ಆಡುವುದಿಲ್ಲ ಎಂದು ಘೋಷಿಸಿದ್ದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಇದೀಗ ತನ್ನ ನಿರ್ಧಾರವನ್ನು ಬದಲಿಸಿದ್ದಾರೆಂದು ವರದಿಯಾಗಿದೆ. ಪಾಕ್ ತಂಡದೊಂದಿಗೆ ಭಾರತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಆಡಲಿದೆ ಎಂದು ಅವರು ಹೇಳಿದ್ದಾರೆ. ಐಸಿಸಿಯ ಒತ್ತಡದಿಂದಾಗಿ ಅವರು ತಮ್ಮ ತೀರ್ಮಾನವನ್ನು ಬದಲಾಯಿಸಿದ್ದಾರೆ. 2017ರಲ್ಲಿ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ವಿವಿಧೋದ್ದೇಶದ ಸ್ಟೇಡಿಯಂ ಪ್ರಯೋಜನವಿಲ್ಲ. ಕ್ರಿಕೆಟ್‌ಗೆ ಮಾತ್ರ ಮೀಸಲಾದ ಮೈದಾನ ಸಿಕ್ಕಿದರೆ ಕೇರಳದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ನಡೆಸಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಕೇರಳ ಕ್ರಿಕೆಟ್ ಅಸೋಸಿಯೇಶನ್ ಇದಕ್ಕೆ ಪ್ರಯತ್ನವನ್ನು ಮಾಡಬೇಕು. ಭಾರತ ತಂಡಕ್ಕೆ ತರಬೇತುದಾರನನ್ನು ಹುಡುಕುವಾಗ ತಯಾರಿಸಲಾದ ಪಟ್ಟಿಯಲ್ಲಿ ಎಲ್ಲರೂ ಅನಿಲ್ ಕುಂಬ್ಳೆಗೆ ಆದ್ಯತೆ ನೀಡಿದ್ದರು. ಆದ್ದರಿಂದ ಅವರನ್ನು ಕೋಚ್ ಆಗಿ ನೇಮಿಸಲಾಯಿತು ಎಂದು ಠಾಕೂರ್ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News