×
Ad

ಚೀನಾ-ಪಾಕ್ ‘ದುಷ್ಟಕೂಟ’ ಬಯಲಿಗೆ ಬಲೂಚ್ ಕಾರ್ಯಕರ್ತರ ಧರಣಿ

Update: 2016-09-25 19:45 IST

ಲಂಡನ್, ಸೆ. 25: ಚೀನಾ-ಪಾಕಿಸ್ತಾನ ‘ದುಷ್ಟಕೂಟ’ವು ಬಲೂಚಿಸ್ತಾನದ ಪ್ರಾಕೃತಿಕ ಸಂಪನ್ಮೂಲಗಳನ್ನು ‘ಕೊಳ್ಳೆಹೊಡೆಯುತ್ತಿರುವುದನ್ನು’ ವಿರೋಧಿಸಿ ‘ಫ್ರೀ ಬಲೂಚಿಸ್ತಾನ ಮೂವ್‌ಮೆಂಟ್’ (ಎಫ್‌ಬಿಎಂ) ಲಂಡನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ಎದುರು ಒಂದು ವಾರದ ಧರಣಿ ಸತ್ಯಾಗ್ರಹವನ್ನು ಆರಂಭಿಸಿದೆ.

ಧರಣಿಯು ಸೆಪ್ಟಂಬರ್ 25ರಂದು ಆರಂಭಗೊಂಡಿದ್ದು, ಅಕ್ಟೋಬರ್ 1ರವರೆಗೆ ಮುಂದುವರಿಯಲಿದೆ ಎಂದು ಎಫ್‌ಬಿಎಂ ರವಿವಾರ ಹೊರಡಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಬಲೂಚಿಸ್ತಾನದಲ್ಲಿ ಚೀನಾದ ವಿಸ್ತರಣಾವಾದಿ ಹುನ್ನಾರಗಳನ್ನು’’ ಎಫ್‌ಬಿಎಂ ಈ ವಾರ ಬಯಲುಗೊಳಿಸಲಿದೆ ಎಂದು ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಸ್ವತಂತ್ರಗೊಳಿಸಲು ಹೋರಾಡುತ್ತಿರುವ ಬಲೂಚಿ ಕಾರ್ಯಕರ್ತರ ಸಂಘಟನೆ ಹೇಳಿದೆ.

ಸೆಪ್ಟಂಬರ್ 25ರಿಂದ 30ರವರೆಗೆ ಪ್ರತಿ ದಿನ ಹಗಲು-ರಾತ್ರಿ ಎಫ್‌ಬಿಎಂನ ಇಬ್ಬರು ಕಾರ್ಯಕರ್ತರು ಚೀನಾ ರಾಯಭಾರ ಕಚೇರಿಯ ಎದುರು ಧರಣಿ ಕುಳಿತುಕೊಳ್ಳಲಿದ್ದಾರೆ. ಚೀನಾದ ರಾಷ್ಟ್ರೀಯ ದಿನವಾಗಿರುವ ಅಕ್ಟೋಬರ್ 1ರಂದು ರಾಯಭಾರ ಕಚೇರಿಯ ಹೊರಗೆ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪ್ರತಿಭಟನೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News