ಭಾರತೀಯರ ವಿರುದ್ಧ ಅಸಭ್ಯ ಹೇಳಿಕೆ: ಪಾಕ್ ಸಂಜಾತ ಬ್ರಿಟಿಶ್ ನಟನ ಉಚ್ಚಾಟನೆ

Update: 2016-09-25 14:21 GMT

ಲಂಡನ್, ಸೆ. 25: ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯರ ವಿರುದ್ಧ ಜನಾಂಗೀಯವಾದಿ ಹೇಳಿಕೆಯೊಂದನ್ನು ನೀಡಿರುವುದಕ್ಕಾಗಿ ಪಾಕಿಸ್ತಾನ ಸಂಜಾತ ನಟ ಮಾರ್ಕ್ ಅನ್ವರ್‌ರನ್ನು ಬ್ರಿಟಿಶ್ ಟಿವಿ ಕಾರ್ಯಕ್ರಮ ‘ಕೋರೊನೇಶನ್ ಸ್ಟ್ರೀಟ್’ನಿಂದ ಹೊರದಬ್ಬಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಅವರು ಹೇಳಿಕೆ ನೀಡಿದ್ದರು. ದಾಳಿಯಲ್ಲಿ 18 ಸೈನಿಕರು ಹುತಾತ್ಮರಾಗಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಕಲಾವಿದರ ಮೇಲೆ ನಿಷೇಧ ಹೇರಬೇಕೆಂದು ಮಹಾರಾಷ್ಟ ನವನಿರ್ಮಾಣ ಸೇನೆ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಭಾರತೀಯರ ಬಗ್ಗೆ ಅಸಭ್ಯ ಪದಗಳನ್ನು ಬಳಸಿ 45 ವರ್ಷದ ಅನ್ವರ್ ಟ್ವೀಟ್ ಮಾಡಿದ್ದಾರೆ ಎಂದು ವೆಬ್‌ಸೈಟೊಂದು ವರದಿ ಮಾಡಿದೆ.

ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರನ್ನು ಪ್ರಸ್ತಾಪಿಸಿ ಟ್ವೀಟ್‌ಗಳನ್ನು ಮಾಡಿದ್ದರು.

ನಟನ ಟಿಪ್ಪಣಿಗಳನ್ನು ನಾವು ‘ಅಸ್ವೀಕಾರಾರ್ಹ’ ಎಂಬುದಾಗಿ ಪರಿಗಣಿಸಿದ್ದೇವೆ ಎಂದು ಐಟಿವಿ ವಕ್ತಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News