×
Ad

ಅಪಾಯಕಾರಿ ಪ್ರದೇಶದಲ್ಲಿ ಸ್ನಾನಕ್ಕಿಳಿದು ನೀರುಪಾಲಾದ ಯುವಕ

Update: 2016-09-25 20:25 IST

ಬೆಳ್ತಂಗಡಿ, ಸೆ.25: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಇಬ್ಬರು ಯುವಕರು ನೇತ್ರಾವತಿ ಸ್ನಾನಘಟ್ಟದಲ್ಲಿ ಅಪಾಯಕಾರಿ ಸ್ಥಳದಲ್ಲಿ ಸ್ನಾನಕ್ಕಿಳಿದು ಓರ್ವ ನದಿಯಲ್ಲಿ ಕೊಚ್ಚಿಹೋಗಿದ್ದು ಇನ್ನೊಬ್ಬನನ್ನು ಸ್ಥಳೀಯರು ಹರಸಾಹಸಪಟ್ಟು ರಕ್ಷಿಸಿದ ಘಟನೆ ರವಿವಾರ ನಡೆದಿದೆ.

ನೀರಿನಲ್ಲಿ ಕೊಚ್ಚಿಕೊಂಡು ನಾಪತ್ತೆಯಾದವವನ್ನು ಹಾಸನ ಜಿಲ್ಲೆಯ ಆದಿ ಚುಂಚನಗಿರಿ ಬೆಳ್ಳೂರು ಕ್ರಾಸ್ ನಿವಾಸಿ ಭರತ್ (23) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತ ಬೆಂಗಳೂರು ಗಾಂಧಿನಗರ ವೀರಭದ್ರ ದೇವಸ್ಥಾನದ ಬಳಿ ನಿವಾಸಿ ಭರತ್ ಕುಮಾರ್ ಬಿ.(23) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಬ್ಬರೂ ಸ್ನೇಹಿತರಾಗಿದ್ದು ಯಾತ್ರಾರ್ಥಿಗಳಾಗಿ ಆಗಮಿಸಿದ್ದರು. ಇವರೀರ್ವರು ಭಕ್ತರು ಸ್ನಾನ ಮಾಡುವ ಸುರಕ್ಷಿತ ಸ್ಥಳದಲ್ಲಿ ಸ್ನಾನಕ್ಕಿಳಿಯದೆ ಅಪಾಯಕಾರಿ ಸ್ಥಳದಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇಬ್ಬರೂ ನೀರಿನಲ್ಲಿ ಮುಳುಗುತ್ತಿದ್ದಂತೆ ಕ್ಷೇತ್ರದ ಸಿಬ್ಬಂದಿ ಹಾಗೂ ಸ್ಥಳೀಯರು ಇವರಿಬ್ಬರ ರಕ್ಷಣೆಗೆ ಧಾವಿಸಿ, ಹಗ್ಗ ಹಾಗೂ ಟ್ಯೂಬ್‌ಗಳನ್ನು ಎಸೆದಿದ್ದಾರೆ. ಇದರ ಸಹಾಯದಿಂದ ಭರತ್ ಕುಮಾರ್ ಬಿ. ಪಾರಾಗಿದ್ದಾರೆ.

ಆದರೆ ಭರತ್ ನೀರು ಪಾಲಾಗಿದ್ದು ಮೃತದೇಹಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣಾ ವತಿಯಿಂದ ಮುಳುಗು ತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News