×
Ad

ಸೈಯದ್ ಮದನಿ ಸುನ್ನಿ ಸೆಂಟ್ರಲ್‌ನಿಂದ ಸಾಮೂಹಿಕ ವಿವಾಹ

Update: 2016-09-25 23:44 IST

ಉಳ್ಳಾಲ, ಸೆ.25: ಉಳ್ಳಾಲ ಅಕ್ಕರೆಕೆರೆ ಸೈಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ಆಶ್ರಯದಲ್ಲಿ ವರ್ಷಕ್ಕೆ ನಡೆಯುವ ಐದು ಜೋಡಿ ಉಚಿತ ವಿವಾಹದ ಪೈಕಿ ನಾಲ್ಕು ಜೋಡಿ ವಿವಾಹ ಮೂರು ತಿಂಗಳ ಹಿಂದೆ ನಡೆದಿದ್ದು, ಇನ್ನೊಂದು ಜೋಡಿ ವಿವಾಹ ರವಿವಾರ ಕೋಟೆಕಾರ್‌ನ ಖಾಸಗಿ ಸಭಾಭವನದಲ್ಲಿ ನಡೆಯಿತು. ಗಡಿಯಾರ ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯ ತೋಕೆ ಮುಹಿಯುದ್ದೀನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಝೈನುಲ್ ಆಬಿದ್ ಜಮಲುಲೈಲಿ ತಂಙಳ್ ಅಲ್‌ಮದನಿ ಕಾಜೂರು ನಿಖಾಹ ನೆರವೇರಿಸಿದರು. ಕಾಸರಗೋಡು ಜಾಮಿಯಾ ಸಅದಿಯಾ ಪ್ರೊ.ಹುಸೈನ್ ಸಅದಿ ಕೆ.ಸಿ.ರೋಡ್ ಮಾತನಾಡಿ, ಬಡ ಹೆಣ್ಮಕ್ಕಳಿಗೆ ಮದುವೆ ಮಾಡಿಕೊಡುವುದು ಪುಣ್ಯದಾಯಕ ಕೆಲಸ ಎಂದರು.
ಅಜ್ಮೀರ್ ಖ್ವಾಜಾ ಅವರ ಪುತ್ರ ಸೈಯದ್ ಷಾ ಅಖ್ತಾರ್ ಹುಸೈನ್ ಚಿಸ್ತಿ ದುಆ ಮಾಡಿದರು.
ವಾಮಂಜೂರು ಮಸೀದಿಯ ಖತೀಬ್ ಬಿ.ಕೆ.ಅಬ್ದುಲ್ ಹಮೀದ್ ಫೈಝಿ, ಮಂಚಿಲ ಜುಮಾ ಮಸೀದಿಯ ಖತೀಬ್ ಜಬ್ಬಾರ್ ಅಶ್ರಫಿ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಯು.ಎಸ್.ಹಂಝ, ಉಳ್ಳಾಲ ನಪಂ ಅಧ್ಯಕ್ಷ ಹುಸೈನ್ ಕುಂಞಿಮೋನು, ಉದ್ಯಮಿ ನೂರುದ್ದೀನ್ ಅನ್ಸಾರಿ, ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷ ಕರೀಮ್, ಬೆಂಗಳೂರಿನ ಕನ್ಸಟ್ರಕ್ಷನ್ ಇಂಜಿನಿಯರ್ ಝಮೀರ್ ಪಾಷಾ, ಸೈಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಯು.ಎ.ಹುಸೈನ್ ಮೋನು, ಉಪಾಧ್ಯಕ್ಷ ಉಮರಬ್ಬ, ಕಾರ್ಯದರ್ಶಿ ಸತ್ತಾರ್ ಮೇಲಂಗಡಿ, ಪದಾಧಿಕಾರಿಗಳಾದ ಇಬ್ರಾಹೀಂ ಮುಕಚ್ಚೇರಿ, ಅಶ್ರಫ್ ಮೇಲಂಗಡಿ, ಚೆರಿಯೋನು ಮೆಲಂಗಡಿ ಉಪಸ್ಥಿತರಿದ್ದರು.
ಆರ್.ಕೆ.ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News