ಕಾನೂನು ತರಬೇತಿ: ಅರ್ಜಿ ಆಹ್ವಾನ

Update: 2016-09-25 18:18 GMT

ಮಂಗಳೂರು, ಸೆ. 25: 2016-17ನೆ ಸಾಲಿನಲ್ಲಿ ಸರಕಾರಿ ವಕೀಲರ ಅಧೀನದಲ್ಲಿ ನಾಲ್ಕು ವರ್ಷಗಳ ಅವಧಿಯ ಉಚಿತ ಕಾನೂನು ತರಬೇತಿ ನೀಡುವ ಕಾರ್ಯಕ್ರಮದಡಿ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 ಅಭ್ಯರ್ಥಿ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿತ ಕಾನೂನು ಪದವೀಧರರಾಗಿದ್ದು, ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ರೂ. ಮೀರಿರಬಾರದು. ನಿಗದಿತ ವಯೋಮಿತಿಯವರಾಗಿದ್ದು, ಅಂತಿಮ ಕಾನೂನು ಪದವಿ ಪೂರ್ಣಗೊಳಿಸಿ ಎರಡು ವರ್ಷ ಮೀರಿರಬಾರದು. ವರ್ಗ-1ರ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಹಾಜರಾತಿಗನುಸಾರವಾಗಿ 2,000 ರೂ. ತರಬೇತಿ ಭತ್ತೆ ನೀಡಲಾಗುವುದು.
ಆಸಕ್ತರು ಅರ್ಜಿಯೊಂದಿಗೆ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ, ಪದವಿ/ಕಾನೂನು ಪದವಿ ಅಂಕ ಪಟ್ಟಿಗಳು, ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿತರಾದ ಬಗ್ಗೆ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಇತ್ತೀಚಿನ ಎರಡು ಭಾವಚಿತ್ರ (ಪಾಸ್‌ಪೋರ್ಟ್ ಸೈಜ್) ಗಳನ್ನು ಲಗತ್ತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 25ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಜಿಲ್ಲಾ ಅಧಿಕಾರಿಯವರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆನೆಗುಂಡಿ ರೋಡ್, ಬಿಜೈ-ಕಾಪಿಕಾಡ್, ಮಂಗಳೂರು ಇಲ್ಲಿ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News