×
Ad

ಖಾತೆಯ ಹಣ ವಂಚಿಸಿ ಆನ್‌ಲೈನ್‌ನಲ್ಲಿ ವಸ್ತು ಖರೀದಿ!

Update: 2016-09-25 23:58 IST

ಕಾರ್ಕಳ, ಸೆ.25: ಎಟಿಎಂ ನಂಬರ್ ಪಡೆದು ಖಾತೆ ಯಲ್ಲಿದ್ದ ಲಕ್ಷಾಂತರ ರೂ. ಹಣದಿಂದ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸಿ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಬಂಗ್ಲೆಗುಡ್ಡೆ ಸರಸ್ವತಿ ಮಂದಿರ ಬಳಿಯ ನಿವಾಸಿ ಗಿರೀಶ್ ವಿಠಲಾಚಾರ್(42) ಎಂಬವರು ಕೆನರಾ ಬ್ಯಾಂಕ್‌ನಲ್ಲಿ ಗೃಹ ಸಾಲದ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಸೆ.12ರಂದು ಅವರ ಮೊಬೈಲ್‌ಗೆ ಕೆ.ಎಸ್.ಶರ್ಮ ಎಂಬ ವ್ಯಕ್ತಿ ಕರೆ ಮಾಡಿ ಗೃಹ ಸಾಲದ ಬಗ್ಗೆ ವಿಚಾರಿಸಿ, ಎಟಿಎಮ್ ಕಾರ್ಡಿನ ಅವಧಿ ಮುಗಿದಿದ್ದು, ಅದರ ನಂಬರ್ ಕೇಳಿದ್ದರು. ಅದಕ್ಕೆ ಗಿರೀಶ್ ಎಟಿಎಂ ಕಾರ್ಡಿನ ಎರಡು ಬದಿಯ ನಂಬರ್ ನೀಡಿದ್ದರು.

ಸೆ.20ರಂದು ಬ್ಯಾಂಕ್ ಮ್ಯಾನೇಜರ್ ಗೃಹ ಸಾಲವನ್ನು ಮಂಜೂರು ಮಾಡಿ ಗಿರೀಶ್ ಖಾತೆಗೆ ಹಣ ಜಮಾ ಮಾಡಿದ್ದರು. ಸೆ.22ರಂದು ಗಿರೀಶ ಖಾತೆ ಪುಸ್ತಕವನ್ನು ಬ್ಯಾಂಕ್‌ನಲ್ಲಿ ಎಂಟ್ರಿ ಮಾಡಿಸಿದಾಗ ಅದರಲ್ಲಿ 10,599ರೂ. ಬ್ಯಾಲೆನ್ಸ್ ಇರುವುದು ಕಂಡುಬಂತು. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಸೆ.20ರಂದು 35,700ರೂ., ಸೆ.21ರಂದು 96,180ರೂ., ಸೆ.22ರಂದು 85,480 ರೂ. ಗಿರೀಶ್ ಖಾತೆಯಿಂದ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀ ದಿಸಿರುವುದು ತಿಳಿದುಬಂತು.

ಕೆ.ಎಸ್.ಶರ್ಮ ಎಂಬ ವ್ಯಕ್ತಿಯು ಗಿರೀಶ್‌ರ ಎಟಿಎಂ ಕಾರ್ಡಿನ ನಂಬ್ರ ಮೊಬೈಲ್ ಮೂಲಕ ಪಡೆದು ಮೂರು ದಿನಗಳಲ್ಲಿ ಗಿರೀಶ್ ಖಾತೆಯಲ್ಲಿದ್ದ 2,17,360 ರೂ. ಹಣದಿಂದ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News