ನಕಲಿ ವೀಡಿಯೋಗೆ ಮರುಳಾಗಿ ತಮ್ಮ ಐಫೋನ್ ಕಳಕೊಂಡರು !
ಲಂಡನ್, ಸೆ.26: ಹಲವಾರು ಮಂದಿ ತಮ್ಮ ಹೊಚ್ಚ ಹೊಸ ಐಫೋನ್ ಗಳಿಗೆ ತಮ್ಮದೇ ಆದ ಹೆಡ್ ಫೋನ್ ಜ್ಯಾಕ್ ನಿರ್ಮಿಸಲು ಫೋನನ್ನು ಡ್ರಿಲ್ ಮಾಡದೇ ಹೋಗಿರುತ್ತಿದ್ದರೆ ಹಲವಾರು ಐಫೋನ್ 7ಗಳು ಉಳಿದುಬಿಡುತ್ತಿದ್ದವೋ ಏನೋ.
ಎಲ್ಲರಿಗೂ ಗೊತ್ತಿರುವ ಹಾಗೆ ಆಪಲ್ ಬ್ರ್ಯಾಂಡಿನ ಹೊಸ ಐಫೋನ್ 7ನಲ್ಲಿ ಎರಡು ಇಯರ್ ಪಾಡ್ ಗಳಿವೆಯಾದರೂ ಹೆಡ್ ಫೋನ್ ಜ್ಯಾಕ್ ಇಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಯೂಟ್ಯೂಬಿನಲ್ಲಿ ಕೆಲ ನಕಲಿ ವೀಡಿಯೊಗಳನ್ನು ಹರಿಯಬಿಟ್ಟ ಪರಿಣಾಮ ಅದನ್ನು ಅನುಸರಿಸಲು ಹೋದ ಹಲವರಿಗೆ ಅವರ ಹೊಚ್ಚ ಹೊಸ ಐಫೋನುಗಳು ಉಪಯೋಗಕ್ಕಿಲ್ಲದಂತಾಗಿದೆ.
ಈ ನಕಲಿ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ಲ್ಯಾಂಪ್ ಒಂದನ್ನು ಉಪಯೋಗಿಸಿ ಫೋನನ್ನು ಎರಡು ಕ್ಲಿಪ್ ಗಳ ನಡುವೆ ಇಟ್ಟು ಐಫೋನನ್ನು ಡ್ರಿಲ್ ಮಾಡಿದ್ದಾನೆ.
ಈ ವೀಡಿಯೋವನ್ನು ನಕಲು ಮಾಡಿದ ಪರಿಣಾಮ ಹಲವರು ಈ 600 ಪೌಂಡ್ ಡಾಲರ್ ಹ್ಯಾಂಡ್ ಸೆಟ್ಟನ್ನು ಕಳೆದುಕೊಳ್ಳಬೇಕಾಗಿ ಬಂದಿತು. ಆ ನಕಲಿ ವೀಡಿಯೋದಲ್ಲಿ ಫೋನಿಗೆ ಹಾನಿಗೊಳಿಸದೆ ಹೆಡ್ ಫೋನ್ ಜ್ಯಾಕನ್ನು ಹೇಗೆ ಡ್ರಿಲ್ ಮಾಡುವುದು ಎಂದು ಹೇಳಲಾಗಿತ್ತಾದರೂ ವಾಸ್ತವವಾಗಿ ಹಾಗೆ ಮಾಡಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಮ್ಮ ಫೋನುಗಳನ್ನು ಕಳೆದುಕೊಂಡ ನಂತರವಷ್ಟೇ ತಿಳಿದು ಬಂದಿತ್ತು.
ಈ ವೀಡಿಯೊವನ್ನು ಸುಮಾರು 80 ಲಕ್ಷ ಬಾರಿ ಜನರು ವೀಕ್ಷಿಸಿದ್ದಾರೆಂದು ತಿಳಿದು ಬಂದಿದ್ದು, ಹಲವರು ಅದರ ಕಮೆಂಟ್ಸ್ ವಿಭಾಗದಲ್ಲಿ ತಮ್ಮ ಸಂಶಯಗಳನ್ನು ಹೇಳಿಕೊಂಡಿದ್ದು ಅದಕ್ಕೆ ಸ್ಪಷ್ಟೀಕರಣ ಕೂಡ ಕೇಳಿದ್ದರು. ಒಬ್ಬರಂತೂ ತಾವು ಈ ವೀಡಿಯೊ ಅನುಕರಿಸಲು ಹೋಗಿ ಫೋನಿನ ಡಿಸ್ಪ್ಲೇ ಹಾಳು ಮಾಡಿಕೊಂಡಿದ್ದಷ್ಟೇ ಅಲ್ಲದೆ ತನ್ನ ಜೀವನದಲ್ಲಿಯೇ ಅತ್ಯಂತ ದೊಡ್ಡ ತಪ್ಪು ಮಾಡಿ ಬಿಟ್ಟಿದ್ದೇನೆಂದು ಬರೆದಿದ್ದಾರೆ. ಹಲವರು ತಾವು ತಮ್ಮ ಬೆಳೆಬಾಳುವ ಫೋನನ್ನು ಈ ವೀಡಿಯೊವನ್ನು ನಕಲು ಮಾಡಿ ಕಳೆದುಕೊಂಡೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಐಫೊನ್ ಎಸ್7 ರಲ್ಲಿ ಹೆಡ್ ಫೋನ್ ಜ್ಯಾಕ್ ಇಲ್ಲದೇ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.