ದೇಶೀಯ ಜಾನುವಾರು ತಳಿಗಳ ಸಂರಕ್ಷಣೆಗಾಗಿ ‘ಗೋಕುಲ ಗ್ರಾಮಗಳ’ ಸ್ಥಾಪನೆ
Update: 2016-09-26 23:28 IST
ಮಥುರಾ,ಸೆ.26: ದೇಶೀಯ ಜಾನುವಾರು ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಗೋಕುಲ ಅಭಿಯಾನದಡಿ ದೇಶಾದ್ಯಂತ 14 ‘ಗೋಕುಲ ಗ್ರಾಮ’ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ರಾಧೇಮೋಹನ ಸಿಂಗ್ ಅವರು ಸೋಮವಾರ ಹೇಳಿದರು.
ಗೋಕುಲ ಗ್ರಾಮ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಮೊದಲ ಗೋಕುಲ ಗ್ರಾಮವು ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮಸ್ಥಳ ಮಥುರಾದಲ್ಲಿ ತಲೆಯೆತ್ತುತ್ತಿದೆ ಎಂದರು.
ಎರಡು ವರ್ಷಗಳ ಬರದ ಬಳಿಕ ಉತ್ತಮ ಮಳೆಯಾಗಿರುವುದರಿಂದ 2016-17ನೆ ಬೆಳೆಸಾಲಿನಲ್ಲಿ 270 ಮಿ.ಟನ್ ಆಹಾರ ಧಾನ್ಯಗಳ ದಾಖಲೆಯ ಇಳುವರಿಗೆ ದೇಶವು ಸಜ್ಜಾಗಿದೆ. ಇದೇ ವೇಳೆ ಬೇಳೆಕಾಳುಗಳ ಉತ್ಪಾದನೆ 21 ಮಿ.ಟನ್‌ಗಳಿಗೆ ಹೆಚ್ಚುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.