ನಕಲಿ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಪೊಲೀಸರಿಂದ 2,000 ಮಂದಿಯ ಹತ್ಯೆ!

Update: 2016-09-27 07:23 GMT

ಇಸ್ಲಾಮಾಬಾದ್, ಸೆಪ್ಟಂಬರ್ 27: ನಕಲಿ ಎನ್‌ಕೌಂಟರ್‌ನಲ್ಲಿ ಕಳೆದ ವರ್ಷ ಪಾಕಿಸ್ತಾನದ ಪೊಲೀಸರು 2000 ಮಂದಿಯನ್ನು ಕೊಂದಿದ್ದಾರೆಂದು ಹ್ಯೂಮನ್ ರೈಟ್ಸ್ ವಾಚ್ ತಿಳಿಸಿದೆ ಎಂದು ವರದಿಯಾಗಿದೆ.

ಅಲ್ಲಿನ ಪೊಲೀಸರು ಸೆರೆಹಿಡಿದ ಕ್ರಿಮಿನಲ್‌ಗಳು, ಶಂಕಿತ ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಸೋಮವಾರ ಹೊರಡಿಸಲಾದ ಹ್ಯೂಮನ್ ರೈಟ್ಸ್ ವಾಚ್ ವರದಿಯಲ್ಲಿ ವಿವರಿಸಲಾಗಿದೆ. ಮಾಧ್ಯಮಗಳಲ್ಲಿ ವರದಿಯಾದ ಕೊಲೆಪಾತಕ ಸನ್ನಿವೇಶಗಳು ನಕಲಿಯಾಗಿವೆ. ಘರ್ಷಣೆ ನಡೆಯಿತೆಂದು ವರದಿಯಾದರೂ ಅದರಲ್ಲಿ ಯಾವ ಪೊಲೀಸರೂ ಕೊಲ್ಲಲ್ಪಟ್ಟಿಲ್ಲ,ಗಾಯಗೊಂಡಿಲ್ಲ. ಆದರೆ ಪೊಲೀಸರು ಘರ್ಷಣೆ ನಡೆದಿದೆ ಎಂದು ಹೇಳುತ್ತಾರೆ. ಹಲವು ಹಿರಿಯ ಅಧಿಕಾರಿಗಳು ನಕಲಿ ಎನ್‌ಕೌಂಟರ್ ನಡೆದ ಬಗ್ಗೆ ಹ್ಯೂಮನ್ ರೈಟ್ಸ್ ವರದಿಯನ್ನು ಸಮ್ಮತಿಸಿದ್ದಾರೆ.

ಆರೋಪವನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಪೊಲೀಸರು ಕ್ರೂರ ಕ್ರಮಗಳನ್ನು ಅನುಸರಿಸುತ್ತಾರೆ. ಸಾಕಷ್ಟು ತರಬೇತಿ ಸಿಗದವರು ಪೊಲೀಸರು ಆಗಿದ್ದು, ಅವರ ಕ್ರಮಗಳು ಸಮಾಜದಲ್ಲಿ ಅವರ ಕುರಿತು ಬೆದರಿಕೆ ಹುಟ್ಟಲು ಕಾರಣವಾಗಿದೆ ಎಂದು ಹ್ಯೂಮನ್ ರೈಟ್ಸ್ ಹೇಳಿದೆ.ಕಳೆದ ವರ್ಷ ನಕಲಿ ಎನ್‌ಕೌಂಟರ್ ಮೂಲಕ ಪಾಕಿಸ್ತಾನ ಪೊಲೀಸರು ಲಶ್ಕರೆ ಜಂಗ್ವಿಯ ಹಿರಿಯ ಸದಸ್ಯರನ್ನು ಹತ್ಯೆಗೈದಿದ್ದಾರೆ. ಇದು ಯೋಜನಾಬದ್ಧವಾಗಿ ನಡೆಯುತ್ತಿರುವ ಕೊಲೆಪಾತಕವಾಗಿದೆ.ಇತೀಚೆಗೆ ಈರೀತಿಯಲ್ಲಿ ಕರಾಚಿಯಲ್ಲಿ ಭಯೋತ್ಪಾದಕರೆಂದು ಆರೋಪಿಸಿ ಹಲವಾರು ಮಂದಿಯನ್ನು ಈ ರೀತಿಯಲ್ಲಿ ಕೊಲ್ಲಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಹ್ಯೂಮನ್ ರೈಟ್ಸ್ ವಾಚ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News