ವಿಮಾನದ ಶೌಚಾಲಯಗಳ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ ಗೊತ್ತೆ?

Update: 2016-09-27 10:33 GMT

ವಿಮಾನದ ಶೌಚಾಲಯಗಳೇನು ಉತ್ತಮವಲ್ಲ ಎನ್ನುವುದು ನಮಗೆ ಗೊತ್ತು. ಅವುಗಳು ಸ್ವಚ್ಛವಾಗಿದ್ದು, ರೈಲಿನ ಶೌಚಾಲಯಗಳಿಗಿಂತ ಸಮಾಧಾನಕರ ವಾಸನೆ ಇರುತ್ತದೆ. ಹಾಗಿದ್ದರೂ ಅವು ಬಹಳ ಕಿರಿದಾಗಿದ್ದು, ಕಿಟಕಿ ಇಲ್ಲದಿರುವುದು ಇನ್ನಷ್ಟು ಉಸಿರುಗಟ್ಟಿಸುತ್ತದೆ. ಆದರೆ ನಾವು ಮಾಡಿದ ಶೌಚ ಎಲ್ಲಿ ಹೋಗುತ್ತದೆ ಎನ್ನುವುದು ನಿಮಗೆ ಗೊತ್ತೆ? ಅದನ್ನು ಸ್ವಚ್ಛ ಮಾಡುವುದು ಯಾರು?

ಹಳೇ ವಿಮಾನ ಶೌಚಾಲಯಗಳು ದೊಡ್ಡ ಪ್ರಮಾಣದ ಬ್ಲೂ ಸಾನಿಟೇಶನ್ ಫ್ಲೂಯಿಡ್ ಬಳಸುತ್ತಿದ್ದರು ಮತ್ತು ಅದರಿಂದ ಸಾಮಾನ್ಯವಾಗಿ ಶೌಚ ಸೋರಿಕೆಯಾಗುತ್ತಿತ್ತು. ಅದು ಬ್ಲೂ ಐಸ್‌ನ ದೊಡ್ಡ ಬಾಲ್ ಮಾಡುವ ಬದಲಾಗಿ ಮಂಜಾದ ಗಡ್ಡೆಗಳ ತುಂಡುಗಳಾಗುತ್ತಿದ್ದವು. ಹೀಗಾಗಿ ಅವರು ಹೊಸ ವಿಧಾನ ಕಂಡುಕೊಳ್ಳಬೇಕಿತ್ತು.

ಇತ್ತೀಚೆಗೆ ಎಲ್ಲವೂ ವಿಮಾನದಲ್ಲೇ ಉಳಿಯುತ್ತವೆ. ಆದರೆ ವಿಧಾನ ಮಾತ್ರ ಬಹಳ ಸಂಕೀರ್ಣ. ಈಗ ನಾವು ಫ್ಲಷ್ ಮಾಡಿದಾಗ ಒಳಗಿನ ವಾಲ್ವ್ ತೆಗೆದುಕೊಂಡು ಶೌಚಾಲಯದ ಬೌಲ್‌ನಲ್ಲಿರುವುದೆಲ್ಲವನ್ನೂ ಒಳಗೆಳೆದುಕೊಳ್ಳುತ್ತದೆ. ಅದನ್ನು ನಂತರ ಟೆಫ್ಲಾನ್ ಎನ್ನುವ ನಾನ್ ಸ್ಟಿಕ್ ಪ್ಯಾನ್ಸ್ ಮಾಡುವ ಮೆಟೀರಿಯಲ್‌ನಿಂದ ಕೋಟ್ ಮಾಡಲಾಗುತ್ತದೆ. ತ್ಯಾಜ್ಯವನ್ನು ನಂತರ ಕೊಳವೆಗಳ ಮೂಲಕ ಕಳುಹಿಸಿ ವಿಮಾನದಲ್ಲಿರುವ ಟ್ಯಾಂಕಿನಲ್ಲಿ ಇಡಲಾಗುತ್ತದೆ.

ವಿಮಾನ ಕೆಳಗೆ ಇಳಿಯುತ್ತಿದ್ದಂತೆ ಎಲ್ಲಾ ತ್ಯಾಜ್ಯವನ್ನು ಶಕ್ತಿಯುತ ಹೋಸ್ ಮೂಲಕ ಟ್ರಕ್‌ನಲ್ಲಿ ಸಾಗಿಸಲಾಗುತ್ತದೆ. ಇದು ಮುಖ್ಯವಾಗಿ ಕೊಳಚೆ ತೆಗೆಯುವ ವಾಹನ. ಎಲ್ಲಾ ತ್ಯಾಜ್ಯವನ್ನು ಅದು ಒಳಗೆಳೆದುಕೊಂಡ ಮೇಲೆ ಟ್ಯಾಂಕ್‌ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಟ್ರಕ್ ತ್ಯಾಜ್ಯವನ್ನು ಒಳಚರಂಡಿಗೆ ಕೊಂಡೊಯ್ಯುತ್ತದೆ. ಈ ಟ್ರಕ್‌ನ ಚಾಲಕನಾಗುವುದು ಕನಸಿನ ಉದ್ಯೋಗವೇನೂ ಆಗಿರದು. ಆದರೆ ಇದು ಬಹಳ ಪ್ರಮುಖ ಕೆಲಸ.

Full View

ಕೃಪೆ: indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News