ಭಾರತಕ್ಕೆ "ಪರಮಾಪ್ತ"ವಾಗಿ ಮುಂದುವರಿಯಲಿದೆಯೇ ಪಾಕಿಸ್ತಾನ ?

Update: 2016-09-27 13:38 GMT

ಹೊಸದಿಲ್ಲಿ,ಸೆ.27: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕರೆದಿರುವ ಸಭೆಯಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿರುವ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಭಾರತವು ಪುನರ್‌ಪರಿಶೀಲಿಸಲಿದೆ. ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

1996ರಲ್ಲಿ ತೆರಿಗೆಗಳು ಮತ್ತು ವ್ಯಾಪಾರ ಕುರಿತ ವಿಶ್ವ ವ್ಯಾಪಾರ ಸಂಘಟನೆ ೆ(ಡಬ್ಲುಟಿಒ)ಯ ಸಾಮಾನ್ಯ ಒಪ್ಪಂದದಡಿ ಪಾಕಿಸ್ತಾನಕ್ಕೆ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ನೀಡಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿರುವ ಈ ಒಪ್ಪಂದದಂತೆ ಉಭಯ ರಾಷ್ಟ್ರಗಳು ಪರಸ್ಪರರನ್ನು ಮತ್ತು ಡಬ್ಲುಟಿಒ ಸದಸ್ಯ ರಾಷ್ಟ್ರಗಳನ್ನು ಆಪ್ತ ವ್ಯಾಪಾರ ಪಾಲುದಾರರೆಂದು ಪರಿಗಣಿಸಬೇಕಿದೆ.

ಅಸೋಚಾಮ್‌ನ ಲೆಕ್ಕಾಚಾರದಂತೆ 2015-16ರಲ್ಲಿ ಭಾರತದ ಒಟ್ಟು ವ್ಯಾಪಾರ ಮೊತ್ತ 641 ಬಿಲಿಯನ್ ಡಾ.ಗಳಾಗಿದ್ದು, ಇದರಲ್ಲಿ ಪಾಕಿಸ್ತಾನದ ಪಾಲು ಕೇವಲ 2.67 ಬಿಲಿಯನ್ ಡಾ.ಗಳಾಗಿವೆ.

ಪಾಕಿಸ್ತಾನಕ್ಕೆ ಭಾರತದ ರಫ್ತು 2.17 ಬಿ.ಡಾ.ಅಥವಾ ಭಾರತದ ಒಟ್ಟು ರಫ್ತಿನ ಶೇ.0.83ರಷ್ಟಾಗಿದ್ದರೆ, ಪಾಕಿಸ್ತಾನದಿಂದ ಆಮದು 500 ಮಿ.ಡಾ.ಗಿಂತ ಕಡಿಮೆ ಅಥವಾ ಭಾರತದ ಒಟ್ಟು ಆಮದಿನ ಶೇ.0.13ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News