ಪಡುಬಿದ್ರೆ ಬೀಚ್‌ನಲ್ಲಿ ಪ್ರವಾಸೋದ್ಯಮ ದಿನಾಚರಣೆ

Update: 2016-09-27 13:58 GMT

ಪಡುಬಿದ್ರೆ, ಸೆ.27: ಪಡುಬಿದ್ರೆ ಬೀಚ್‌ನಲ್ಲಿ ಮಂಗಳವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ವಿಶ್ವಪ್ರವಾಸೋದ್ಯಮ ದಿನವನ್ನು ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಮಿತಿ ಸಹಯೋಗದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಣಿಪಾಲದ ಮರಳು ಶಿಲ್ಪ ಕಲಾವಿದರು ರಚಿಸಿದ ಮರಳು ಕಲಾಕೃತಿ ಎಲ್ಲರ ಗಮನ ಸೆಳೆಯಿತು. ಮಣಿಪಾಲದ ಹಾಟ್ ಪಿಸ್ಟನ್ ತಂಡದ ಸದಸ್ಯರ ಬೈಕ್ ಸಾಹಸ ಪ್ರದರ್ಶನ ಜನಮನ ಸೆಳೆಯಿತು. ಪ್ರವಾಸೋದ್ಯಮ ದಿನಾಚರಣೆಯಲ್ಲಿ ಸೆರೆ ಹಿಡಿವ ಬೀಚ್‌ನ ಉತ್ತಮ ಸೆಲ್ಫಿ ಚಿತ್ರಗಳಿಗೆ ಉತ್ತಮ ಬಹುಮಾನ ಘೋಷಣೆ ಹಿನ್ನಲೆಯಲ್ಲಿ ಯುವಜನತೆ ಸೆಲ್ಫಿ ತೆಗೆದುಕೊಳ್ಳುತಿದ್ದ ದೃಶ್ಯ ಕಂಡುಬಂತು. ಬೋಟಿಂಗ್, ಕುದುರೆ ಸವಾರಿ, ಇಂಪೋರ್ಟೆಡ್ ಬೈಕ್‌ಗಳ ಪ್ರದರ್ಶನ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಸಕ ವಿನಯಕುಮಾರ್ ಸೊರಕೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಶೆಟ್ಟಿ, ಪಡುಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಮಯಂತಿ ಅಮೀನ್, ಉಪಾಧ್ಯಕ್ಷ ವೈ.ಸುಕುಮಾರ್, ಬಂಟರ ಸಂಘದ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News