ಟ್ಯಾಂಕರ್ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2016-09-27 21:57 IST
ಬೈಂದೂರು, ಸೆ.27: ಶಿರೂರು ಸಂತೆ ಮಾರುಕಟ್ಟೆ ಬಳಿ ಸೆ.27ರಂದು ಅಪರಾಹ್ನ 3:45ರ ಸುಮಾರಿಗೆ ಟ್ಯಾಂಕರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಗಣೇಶ್ ನಾಯ್ಕ(23) ಎಂದು ಗುರುತಿಸಲಾಗಿದೆ. ದಾಂಡೇಲಿ ಮೂಲದ ಇವರು ಪ್ರಸ್ತುತ ಭಟ್ಕಳದಲ್ಲಿರುವ ತನ್ನ ಅಜ್ಜಿ ಮನೆ ಯಲ್ಲಿ ವಾಸ ಮಾಡುತ್ತಿದ್ದರು. ಸೇಲ್ಸ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ ಇವರು ಬೈಂದೂರು ಕಡೆಯಿಂದ ಭಟ್ಕಳ ಕಡೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಎದುರಿನಲ್ಲಿದ್ದ ಕಾರನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್ ಸವಾರ ರಸ್ತೆ ಬಿದ್ದಿದ್ದು, ಅವರ ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.