×
Ad

ಮಂಗಳೂರು: ಲಿಫ್ಟ್ ನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ: ವೃದ್ಧನ ಬಂಧನ

Update: 2016-09-27 23:40 IST

ಮಂಗಳೂರು, ಸೆ. 27: ಆಸ್ಪತ್ರೆವೊಂದರಲ್ಲಿ ಲಿಫ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಭಾರತ ಮೂಲದ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ವೃದ್ಧನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಬಂಟ್ವಾಳ ಸಜೀಪ ನಿವಾಸಿ ಅಝೀಜ್ (60) ಎಂದು ಗುರುತಿಸಲಾಗಿದೆ.

ಉತ್ತರ ಭಾರತದ ಮಿಜೋರಾಮ್ ಮೂಲದ ಯುವತಿಯ ನಗರದ ಮಂಗಳಾ ಆಸ್ಪತ್ರೆಯಲ್ಲಿ ಲಿಫ್ಟ್ ಆಪರೇಟರ್ ಆಗಿದ್ದಳು. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತನ್ನ ಪತ್ನಿಯನ್ನು ಸೋಮವಾರ ಮಧ್ಯಾಹ್ನ ವೇಳೆ ನೋಡಲು ಬಂದಿದ್ದ ವೃದ್ಧ ಅಝೀಝ್ ಆಸ್ಪತ್ರೆಯ ಲಿಫ್ಟ್ ಮೂಲಕ ಮೇಲಂತಸ್ತಿಗೆ ತೆರಳಲು ಲಿಪ್ಟ್‌ನೊಳ ಪ್ರವೇಶಿಸಿದ್ದ. ಲಿಫ್ಟ್ ಬಾಗಿಲು ಹಾಕುತ್ತಿದ್ದಂತೆ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿ ಲಿಫ್ಟ್ ನಿಲ್ಲಿಸಿ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News