×
Ad

ರುದ್ರಭೂಮಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ: ಕಾಮಗಾರಿಗೆ ತಡೆ

Update: 2016-09-27 23:49 IST

ಉಳ್ಳಾಲ, ಸೆ.27: ಉಳ್ಳಾಲ ಬೀಚ್ ರಸ್ತೆಯ ಹಿಂದೂ ರುದ್ರಭೂಮಿಗೆ ಸಂಬಂಧ ಪಟ್ಟ ಜಾಗದಲ್ಲಿ ನಗರಸಭಾ ಆಡಳಿತವು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹಿಂದೂ ರುದ್ರಭೂಮಿ ಸಮಿತಿಯ ಸದಸ್ಯರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಉಳ್ಳಾಲ ಬೀಚ್ ರಸ್ತೆಯ ಹಿಂದೂ ರುದ್ರಭೂಮಿಗೆ ಸಂಬಂಧಿತ ಖಾಲಿ ಜಾಗದಲ್ಲಿ ನಗರಾಧ್ಯಕ್ಷ ಹುಸೇನ್ ಕುಂಞಿಮೋನು, ಪೌರಾಯುಕ್ತೆ ರೇಖಾಶೆಟ್ಟಿ ಮತ್ತು ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಪಿಲ್ಲರ್ ನಿರ್ಮಾಣಕ್ಕೆ ಸುಮಾರು ಹತ್ತರಷ್ಟು ಬೃಹತ್ ಗುಂಡಿಗಳನ್ನು ತೆಗೆಸಿದ್ದರು. ಈ ಸುದ್ದಿ ತಿಳಿದ ರುದ್ರಭೂಮಿ ನಿರ್ವಹಣಾ ಸಮಿತಿ ಸದಸ್ಯರು ಜಮಾಯಿಸಿ ಯಾವುದೇ ಸೂಚನೆ ನೀಡದೆ ಸಾರ್ವಜನಿಕ ರುದ್ರಭೂಮಿ ಜಾಗದಲ್ಲಿ ವಿಲೇವಾರಿ ಘಟಕ ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೌರಾಯುಕ್ತೆ ರೇಖಾ ಶೆಟ್ಟಿ ಮಾತನಾಡಿ, ತಾತ್ಕಾಲಿಕವಾಗಿ ಲಾರಿಗಳಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ತುಂಬಿಸಲು ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಈ ಪ್ರದೇಶದಲ್ಲಿ ನಡೆಯುತ್ತಿದೆ ಎಂದು ಸಮಾಧಾನ ಪಡಿಸಲು ಮುಂದಾದರೂ ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಬ್ಯಾರಿಕೇಡ್ ಅಳವಡಿಸುವುದಾದರೆ ಬೃಹತ್ ವಿಶಾಲ ಜಾಗದ ಸುತ್ತಲೂ ಬೃಹತ್ ಹೊಂಡಗಳನ್ನು ತೆರೆದದ್ದು ಏಕೆಂದು ಪ್ರಶ್ನಿಸಿದರು.ಅಲ್ಲದೆ ಆರಂಭಿಸಿದ ಕಾಮಗಾರಿಗೆ 9 ಲಕ್ಷ ರೂ. ಮೀಸಲಿಟ್ಟಿದ್ದು, ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಕೆಗೆ ಇಷ್ಟೊಂದು ದುಡ್ಡಿನ ಅಗತ್ಯತೆ ಇದೆಯೇ ಎಂದು ನಗರಾಧ್ಯಕ್ಷರಲ್ಲಿ ಪ್ರಶ್ನಿಸಿದರು.
ಕೊನೆಗೆ ಪೌರಾಯುಕ್ತೆ ರೇಖಾಶೆಟ್ಟಿರವರು ಸಮಿತಿಯ ಮಾತಿಗೆ ಗೌರವ ಕೊಟ್ಟು ಕಾಮಗಾರಿ ಸ್ಥಗಿತಗೊಳಿಸಿ ಕೊರೆದ ಬೃಹತ್ ಗುಂಡಿಗಳನ್ನು ಜೆಸಿಬಿ ಯಂತ್ರದಿಂದ ಮುಚ್ಚಿಸಿದರು.
‘ಬೀಚ್ ರಸ್ತೆಯು ಪ್ರವಾಸೋದ್ಯಮ ಇಲಾಖಾ ಪರಿಮಿತಿಯಲ್ಲಿದ್ದು, ಇಲ್ಲಿ ಸಾರ್ವಜನಿಕ ಪ್ರದೇಶದಲ್ಲೆ ರಾಶಿ ಬಿದ್ದಿರುವ ತ್ಯಾಜ್ಯದ ರಾಶಿಯನ್ನು ವ್ಯವಸ್ಥಿತವಾಗಿ ಲಾರಿಯಲ್ಲಿ ತುಂಬಿಸಿ ವಿಲೇವಾರಿ ನಡೆಸಲಿಕ್ಕಾಗಿ ಬ್ಯಾರಿಕೇಡ್ ಅಳವಡಿಸಲು ಮುಂದಾಗಿದ್ದೆವು. ಆದರೆ ನೂತನವಾಗಿ ನಿಯೋಜನೆಗೊಂಡ ತಮಗೆ ಈ ಜಾಗವು ಹಿಂದೂ ರುಧ್ರಭೂಮಿಗೆ ಸಂಬಂಧಿಸಿರುವುದರ ಬಗ್ಗೆ ಅರಿವಿರಲಿಲ್ಲ. ಮುಂದಿನ ದಿವಸಗಳಲ್ಲಿ ಸ್ಥಳೀಯ ನಗರ ಸದಸ್ಯೆ, ರುದ್ರಭೂಮಿ ಸದಸ್ಯರ ಸಮಕ್ಷಮದಲ್ಲಿ ಸಭೆ ನಡೆಸಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.
ನಗರದ ಪಚ್ಚನಾಡಿ ಹೊರತುಪಡಿಸಿ ಕಸ ವಿಲೇವಾರಿ ನಡೆಸಲು ನಗರಸಭೆಗೆ ಬೇರೆಲ್ಲೂ ಸ್ಥಳಾವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ನಗರ ವ್ಯಾಪ್ತಿಯಲ್ಲಿ ಸ್ಥಳದ ಅನ್ವೇಷಣಾ ಕಾರ್ಯ ಮುಂದುವರೆದಿದೆ.
- ರೇಖಾ ಶೆಟ್ಟಿ, ಉಳ್ಳಾಲ ನಗರ ಪೌರಾಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News