×
Ad

ಯೆನೆಪೊಯದಲ್ಲಿ ಅಂತರ್ಜಾಲ ತಂತ್ರಜ್ಞಾನ ಕಾರ್ಯಾಗಾರ

Update: 2016-09-27 23:50 IST

ಮೂಡುಬಿದಿರೆ, ಸೆ.27: ಯೆನೆಪೊಯ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್, ಇನ್‌ಫಾರ್ಮೆಷನ್ ವಿಭಾಗದ ಆಶ್ರಯದಲ್ಲಿ ಐ-ಮಿಡೆಟಾ ಹಾಗೂ ಐಬಿಎನ್‌ಸಿ ಸಹಯೋಗದೊಂದಿಗೆ ಏರ್ಪಡಿಸಲಾದ ಅಂತರ್ಜಾಲ ತಂತ್ರಜ್ಞಾನದ ಕುರಿತು ಮೂರು ದಿನಗಳು ನಡೆಯುವ ಕಾರ್ಯಾಗಾರಕ್ಕೆ ಮಂಗಳವಾರ ತೋಡಾರಿನಲ್ಲಿರುವ ಕ್ಯಾಂಪಸ್‌ನಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಇನ್ಫೋಸಿಸ್‌ನ ಉಪಾಧ್ಯಕ್ಷ ಬ್ರಿಜೇಶ್ ಕೃಷ್ಣನ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಮುನ್ನೂರು ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯಿಂದ ತಂತ್ರಜ್ಞಾನದಲ್ಲಿ ಗುರುತರ ಅಭಿವೃದ್ಧಿಯಾಗಿದೆ. 1960ರ ನಂತರ ಕೈಗಾರಿಕೆಯಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚಾಗ ತೊಡಗಿತು. ಕಂಪ್ಯೂಟರ್ ತಂತ್ರಜ್ಞಾನದಲ್ಲಿಂದು ಅಪರಿಮಿತ ಸಾಧ್ಯತೆಗಳಿವೆ. ಅಡ್ವಾನ್ಸ್ ಟೆಕ್ನಾಲಜಿಗಳ ಅವಿಷ್ಕಾರ ಹಾಗೂ ಬಳಕೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದರು. ಪ್ರಾಂಶುಪಾಲ ಡಾ.ಆರ್.ಜಿ.ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಹಾಗೂ ಕ್ಯಾಲಿಕಟ್ ವಿವಿಯ ಮಾಜಿ ಉಪಕುಲಪತಿ ಡಾ.ಎಂ.ಅಬ್ದುರ್ರಹ್ಮಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಐಬಿಎನ್‌ಸಿ ತರಬೇತುದಾರ ಅನೂಷ್ ಪಾಂಡೆ ಭಾಗವಹಿಸಿದ್ದರು. ಡಾ.ಜೀವನ್ ಪಿಂಟೊ ಸ್ವಾಗತಿಸಿದರು. ಪ್ರೊ.ಗುರುಪ್ರಸಾದ್ ಜಿ. ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಸುರೇಖಾ ಕಾರ್ಯಾಗಾರದ ಮಾಹಿತಿ ನೀಡಿದರು. ಪ್ರೊ.ಪಾಂಡು ನಾಯಕ್ ವಂದಿಸಿದರು. ಟಿಜಂಡ್ರಾ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News