ಇನ್ನು ಕತರ್ ಭೇಟಿ ಬಹಳ ಸುಲಭ
ದೋಹಾ, ಸೆ.28: ಪ್ರಮುಖ ಹೆಜ್ಜೆಯೊಂದರಲ್ಲಿ ಕತರ್ ಪ್ರವಾಸೋದ್ಯಮ ಪ್ರಾಧಿಕಾರ, ಕತರ್ ಏರ್ ವೇಸ್ ಹಾಗೂ ಕತರ್ ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯಪರಿಷ್ಕೃತ ಪ್ರವಾಸೋದ್ಯಮ ವೀಸಾ ಯೋಜನೆಯೊಂದನ್ನು ಘೋಷಿಸಿದೆ. ಈ ದೇಶಕ್ಕೆ ಭೆೀಟಿ ನೀಡ ಬಯಸುವವರಿಗೆ ಇದರಿಂದಬಹಳಷ್ಟು ಅನುಕೂಲವಾಗಲಿದೆಯಲ್ಲದೆ ಕತರ್ ದೇಶವನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸುವ ಉದ್ದೇಶವನ್ನೂ ಹೊಂದಿದೆ.
ಈ ಯೋಜನೆಯನ್ವಯ ಪ್ರಯಾಣಿಕರಿಗೆ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಐದು ಗಂಟೆ ಅವಧಿಯ ಟ್ರಾನ್ಸಿಟ್ ಸಮಯ ಇದೆಯೆಂದಾದರೆ ಆತ ಅಥವಾ ಆಕೆ ಕತರ್ ದೇಶದಲ್ಲಿ 96 ಗಂಟೆಗಳ ಕಾಲ, ಅಂದರೆ ನಾಲ್ಕು ದಿನಗಳ ಕಾಲ ಎಂಟ್ರಿ ವೀಸಾ ಪಡೆಯದೆಯೇ ತಂಗಬಹುದಾಗಿದೆ.
ಈ ಹಿಂದಿ ಟ್ರಾನ್ಸಿಟ್ ವೀಸಾ ಯೋಜನೆಯಂತೆ,ಕನಿಷ್ಠಎಂಟು ಗಂಟೆಗಳ ಟ್ರಾನ್ಸಿಟ್ ಸಮಯ ಹೊಂದಿರುವ ಪ್ರಯಾಣಿಕರು ಕತರ್‌ನಲ್ಲಿ ಗರಿಷ್ಠ 48 ಗಂಟೆಗಳ ಕಾಲ, ಅಂದರೆ ಎರಡು ದಿನ ಮಾತ್ರ ತಂಗಬಹುದಾಗಿತ್ತು.
ಕತರ್ ಏರ್ ವೇಸ್ ಪ್ರಯಾಣಿಕರನ್ನು ಆಕರ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆಯೆಂದು ಹೇಳಲಾಗಿದ್ದು ಇದರಿಂದ ಕತರ್ ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಕತರ್ ಟ್ರಾನ್ಸಿಟ್ ವೀಸಾವನ್ನು ಉಚಿತವಾಗಿ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ದೇಶಗಳ ನಾಗರಿಕರೂ ಪಾಸ್‌ಪೋರ್ಟ್‌ಪರಿಶೀಲನೆ ನಂತರಪಡೆಯಬಹುದಾಗಿದೆ. ವಿಶ್ವ ಪ್ರವಾಸೋದ್ಯಮ ದಿನದ ಮುನ್ನಾ ದಿನ ಈ ಹೊಸ ಯೋಜನೆಯನ್ನು ಘೋಷಿಸಲಾಗಿದೆ.
ಎಲ್ಲಾ ವೀಸಾಗಳನ್ನು ಆಂತರಿಕ ವ್ಯವಹಾರಗಳ ಸಚಿವಾಲಯದ ನಿರ್ಧಾರದಂತೆ ನೀಡಲಾಗುವುದು. ಕತರ್ ಏರ್ ವೇಸ್ ವಿಶ್ವದಾದ್ಯಂತ 150ಕ್ಕೂ ಹೆಚ್ಚು ಸ್ಥಳಗಳಿಗೆ ವಿಮಾನ ಸೇವೆಗಳನ್ನು ಒದಗಿಸುತ್ತಿದೆ.
ವಿಹಾರ ನೌಕೆಗಳಲ್ಲಿ ದೇಶ ುತ್ತಲು ಆಗಮಿಸುವ ಪ್ರವಾಸಿಗರಿಗೂಪ್ರವೇಶಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕ್ರಮಗಳನ್ನು ಇತ್ತೀಚೆಗೆ ಕತರ್ ಅಧಿಕಾರಿಗಳು ಘೋಷಿಸಿದ್ದರು.