ಸಿಂಧು ನದಿ ನೀರನ್ನು ತಡೆಯುವ ಭಾರತದ ನಿರ್ಧಾರದ ವಿರುದ್ಧ ಪಾಕ್ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ
Update: 2016-09-28 11:01 IST
ಇಸ್ಲಾಮಾಬಾದ್, ಸೆ.28: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ನೀಡದಿರುವ ಬಗ್ಗೆ ಭಾರತ ಚಿಂತನೆ ನಡೆಸಿರುವ ಬೆನ್ನಲ್ಲೆ ಪಾಕ್ ಸರಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಕೈಗೊಂಡಿದೆ..
ಅಟಾರ್ನಿ ಜನರಲ್ ಅಶ್ತರ್ ಆಸಫ್ ಅಲಿ ನೇತೃತ್ವದ ಪಾಕಿಸ್ತಾನ ನಿಯೋಗ ವಾಷಿಂಗ್ಟನ್ ನಲ್ಲಿ ವಿಶ್ವಬ್ಯಾಂಕ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಪಾಕಿಸ್ತಾನಕ್ಕೆಭಾರತದಿಂದ ಹರಿಯುತ್ತಿರುವ ಸಿಂಧೂ ನದಿ ನೀರನ್ನು ಭಾರತ ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ತಡೆ ನೀಡಬೇಕು ಎಂದು ಅಟಾರ್ನಿ ಜನರಲ್ ಅಶ್ತರ್ ಆಸಫ್ ಅಲಿ ಮನವಿ ಮಾಡಿದ್ದಾರೆ.ಎಂದು ತಿಳಿದು ಬಂದಿದೆ.
ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ಸಿಂಧೂನದಿ ನೀರು ನಿಲುಗಡೆ ಮಾಡುವ ಬಗ್ಗೆ ಭಾರತ ಈಗಾಗಲೇ ಚಿಂತನೆ ನಡೆಸಿದೆ