ಇಸ್ರೇಲ್ ನ ಮಾಜಿ ಅಧ್ಯಕ್ಷ ಸಿಮೊನ್ ಪೆರೆಸ್ ನಿಧನ
Update: 2016-09-28 11:15 IST
ಜೆರುಸಲೇಮ್ ,ಸೆ.28: ಇಸ್ರೇಲ್ ನ ಮಾಜಿ ಅಧ್ಯಕ್ಷ ಸಿಮೊನ್ ಪೆರೆಸ್ ( 93) ನಿಧನರಾದರು. ಅವರು ಎರಡು ವಾರಗಳ ಹಿಂದೆ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.1994ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದ ಸಿಮೊನ್ ಪೆರೆಸ್ ಒಂದು ಬಾರಿ ಇಸ್ರೇಲ್ ನ ಅಧ್ಯಕ್ಷರಾಗಿ ಮತ್ತು ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.