ಬಿಸಿಸಿಐ ಅಧ್ಯಕ್ಷ ಅನುರಾಗ್ ಸಹಿತ ಪ್ರಮುಖರ ತಲೆ ದಂಡ ?

Update: 2016-09-28 10:58 GMT

ನವದೆಹಲಿ,ಸೆ.28 : ಲೋಧಾ ಸಮಿತಿ ಶಿಫಾರಸ್ ನಂತೆ ನ್ಯಾಯಾಲಯ ನೀಡಿದ ನಿರ್ದೇಶದನ್ವಯ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸೇರಿದಂತೆ ಮಂಡಳಿಯ ಇತರ ಪ್ರಮುಖರನ್ನು ಪದಚ್ಯುತಗೊಳಿಸದೇ ಇರುವುದಕ್ಕೆ ಬಿಸಿಸಿಐ ಇಂದು ಸುಪ್ರೀಂ ಕೋರ್ಟಿನಿಂದ ತೀವ್ರ ತರಾಟೆಗೊಳಗಾಗಿದೆ.

ಬಿಸಿಸಿಐ ಉನ್ನತ ಹುದ್ದೆಗಳನ್ನು ಕ್ರಿಕೆಟ್ ಆಡಳಿತಗಾರರಿಗೇ ವಹಿಸಬೇಕೆಂದುಲೋಧಾ ಸಮಿತಿ ಸುಪ್ರೀಂ ಕೋರ್ಟಿಗೆ ನೀಡಿದ ತನ್ನ ವರದಿಯಲ್ಲಿ ತಿಳಿಸಿತ್ತು.

ಆದರೆ ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿಲ್ಲ ಹಾಗೂ ಮಂಡಳಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಬೇಕೆಂದು ನೀಡಿದ ಶಿಫಾರಸುಗಳಿಗೆ ಬಿಸಿಸಿಐ ಕ್ಯಾರೇ ಅನ್ನಲಿಲ್ಲವೆಂದು ಲೋಧಾ ಸಮಿತಿ ಈಗಾಗಲೇ ದೂರಿಕೊಂಡಿದೆಯಲ್ಲದೆ, ತಾನು ಕಳುಹಿಸಿದ ಇಮೇಲ್ ಗಳು ಹಾಗೂ ಇತರ ಪತ್ರಗಳಿಗೆ ಮಂಡಳಿ ಉತ್ತರಿಸಿಲ್ಲವೆಂದು ಹೇಳಿದೆ.

ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಟಿ ಎಸ್ ಠಾಕೂರ್ ಅವರ ನೇತೃತ್ವದ ಹಾಗೂ ಜಸ್ಟಿಸ್ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ‘‘ಬಿಸಿಸಿಐ ತನ್ನದೇ ಕಾನೂನು ಎಂದು ಕೊಂಡಿದ್ದರೆ ಅದು ತಪ್ಪು. ಅವರು ನ್ಯಾಯಾಲಯದ ಆದೇಶವನ್ನು ಮಾನ್ಯ ಮಾಡಬೇಕು’’ಎಂದು ಹೇಳಿತು.

ಬಿಸಿಸಿಐ ನ್ಯಾಯಾಲಯದ ಹೆಚ್ಚಿನ ನಿರ್ದೇಶನಗಳನ್ನು ಪಾಲಿಸಿದ್ದು, ಉಳಿದವುಗಳನ್ನು ಕ್ರಮೇಣ ಪಾಲಿಸುವುದಾಗಿ ಬಿಸಿಸಿಐ ಪರ ವಕೀಲ ಅರವಿಂದ್ ದಾತಾರ್ ಹೇಳಿದಾಗ ‘‘ಕಾನೂನನ್ನು ಉಲ್ಲಂಘಿಸಬೇಕಿಲ್ಲ.ನೀವು ಕೋರ್ಟ್ ಆದೇಶವನ್ನು ಪಾಲಿಸಲೇ ಬೇಕು’’ ಎಂದು ಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News