×
Ad

ಭಾರತ ವಿರೋಧಿ ಲೇಖನ ಟ್ವೀಟ್ ಮಾಡಿದರೆ ಕೇಜ್ರಿವಾಲ್ ?

Update: 2016-09-28 16:13 IST

ನವದೆಹಲಿ,ಸೆ.28 : ಉರಿ ಉಗ್ರ ದಾಳಿಯ ಸಂಬಂಧ ರಾಷ್ಟ್ರೀಯ ದೈನಿಕವೊಂದರಲ್ಲಿ ಪ್ರಕಟವಾದ ಪಾಕ್ ಪರ ಲೇಖನವೊಂದನ್ನುಶೇರ್ ಮಾಡಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವಿಟ್ಟರಿಗರಿಂದ ಸಾಕಷ್ಟು ಟೀಕೆಗಳಿಗೊಳಗಾಗಿದ್ದಾರೆ. ಪಾಕ್ ಉಗ್ರವಾದಿಗಳು ಉರಿ ದಾಳಿ ನಡೆಸಿದ ನಂತರ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತ ಒಬ್ಬಂಟಿಯಾಗುತ್ತಿದೆಯೇ ವಿನಹ ಪಾಕಿಸ್ತಾನವಲ್ಲವೆಂದು ಆ ಲೇಖನದಲ್ಲಿ ಬರೆಯಲಾಗಿತ್ತು.

ಈ ಲೇಖನವನ್ನು ಶೇರ್ ಮಾಡಿ ಕೇಜ್ರಿವಾಲ್ ‘‘ಬಹಳ ಒಳ್ಳೆಯ ಲೇಖನ.ಉರಿ ವಿಚಾರದಲ್ಲಿ ಪಾಕ್ ಬದಲು ಭಾರತ ಒಬ್ಬಂಟಿಯಾಗುತ್ತಿರುವಂತೆ ಕಾಣುತ್ತಿದೆ,’’ಎಂದು ಟ್ವೀಟ್ ಮಾಡಿದ್ದರು.

ಟ್ವಿಟ್ಟರಿಗರು ಈ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.‘‘ಭಾರತವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪಾಕಿಸ್ತಾನವನ್ನು ಒಬ್ಬಂಟಿಯಾಗಿಸಲು ಯತ್ನಿಸುತ್ತಿದ್ದರೆ ದೆಹಲಿಯ ಸಿಎಂ ಭಾರತವನ್ನು ಒಬ್ಬಂಟಿಯಾಗಿಸುವ ಬಗೆಗಿನ ಲೇಖನ ಟ್ವೀಟ್ ಮಾಡಿದ್ದಾರೆ’’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ

ಇನ್ನೊಬ್ಬರು ‘‘ಕೇಜ್ರಿವಾಲ್ ಅವರು ರಾಜಕೀಯ ಬದಿಗೊತ್ತಿ ರಾಷ್ಟ್ರೀಯ ಹಿತಾಸಕ್ತಿ ಎತ್ತಿ ಹಿಡಿಯುವರು ಎಂದು ನಾವು ಭಾವಿಸಿದ್ದರೆ ಅವರು ನಾಚಿಕೆಯಿಲ್ಲದವರಂತೆ ವರ್ತಿಸಿದ್ದಾರೆ’’ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News