ಕರಣ್ ಜೋಹರ್‌ಗೆ ಎಂಎನ್‌ಎಸ್ ನಿಂದ ಬೆದರಿಕೆ
ಮುಂಬೈ,ಸೆಪ್ಟಂಬರ್ 28: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್‌ಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಬೆದರಿಕೆಹಾಕಿದೆ. ಈ ಹಿಂದೆ ಪಾಕಿಸ್ತಾನದ ನಟನಟಿಕಲಾಕಾರರಿಗೂ ರಾಜ್‌ಠಾಕ್ರೆಯ ಎಂಎನ್‌ಎಸ್ ಬೆದರಿಕೆ ಹಾಕಿತ್ತು. ಪಾಕಿಸ್ತಾನದ ನಟನನ್ನು ಇಟ್ಟು ಚಿತ್ರನಿರ್ಮಿಸಿದ್ದಕ್ಕಾಗಿ ಕರಣ್ ಜೋಹರ್‌ರ ಪ್ರೊಡಕ್ಷನ್ ಹೌಸ್ ಮುಂದೆ ಅದು ಪತ್ರಿಭಟನೆಹಮ್ಮಿಕೊಂಡಿತ್ತು ಎಂದು ವರದಿಯಾಗಿದೆ.
ಕರಣ್ ಜೋಹರ್‌ರ ‘ಎ ದಿಲ್ ಹೈ ಮುಶ್ಕಿಲ್’ ಚಿತ್ರದಲ್ಲಿ ಪಾಕ್ ನಟ ಫವಾದ್ ಖಾನ್ ನಟಿಸುತ್ತಿದ್ದಾರೆ. ಇದುವೆ ಪ್ರತಿಭಟನಾಕಾರರ ಕೋಪಕ್ಕೆ ಕಾರಣವಾಗಿದೆ. ಈ ಸಿನೆಮಾವನ್ನು ಬಿಡುಗಡೆಯಾಗಲು ಬಿಡಲಾರೆವು ಎಂದು ಅವರು ಕರಣ್ ಜೋಹರ್‌ರ ಪ್ರೊಡೆಕ್ಷನ್ ಹೌಸ್‌ಮುಂದೆ ಕೂಗುಹಾಕಿದ್ದಾರೆ. ಪಾಕ್‌ನಟನ ವಿರುದ್ಧವೂ ಕೂಗುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಹದಿನೈದು ಮಂದಿ ಎಂಎನ್‌ಎಸ್ ಕಾರ್ಯಕರ್ತರನ್ನು ಮುಂಬೈ ಪೊಲೀಸ್ ಆ್ಯಕ್ಟ್ 68ರ ಪ್ರಕಾರ ಬಂಧಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉರಿ ಭಯೋತ್ಪಾದನಾ ದಾಳಿಯ ನಂತರ ಎಂಎನ್‌ಎಸ್ ಪಾಕ್ ವಿರುದ್ಧ ಕೆಂಡಕಾರುತ್ತಿದೆ. ಭಾರತ ತೊರೆಯಬೇಕೆಂದು ಎಂಎನ್‌ಎಸ್ ಕಾರ್ಯಕರ್ತರು ಕೂಗುಹಾಕಿದ್ದ ಫವಾದ್‌ಖಾನ್ ಜುಲೈಯಲ್ಲಿಯೇ ಪಾಕಿಸ್ತಾನಕ್ಕೆ ಹೋಗಿದ್ದರು ಎಂದು ಅವರ ನಿಕಟ ಮೂಲಗಳು ತಿಳಿಸಿವೆ. ಪಾಕ್ ನಟ ಫವಾದ್‌ಖಾನ್‌ರಂತೆ, ಅಲಿಝಫರ್, ಮಹೀರಾ ಖಾನ್, ಇಮ್ರಾನ್ ಅಬ್ಬಾಸ್ ಕೂಡಾ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿದ್ದಾರೆಂದು ವರದಿತಿಳಿಸಿದೆ.