ಪ್ರಭಾಕರ ಭಟ್ ವಿರುದ್ಧ ಕ್ರಮಕ್ಕೆ ಒತ್ತಾಯ
Update: 2016-09-28 18:44 IST
ಮಂಗಳೂರು, ಸೆ. 28: ಸುಳ್ಯದಲ್ಲಿ ಮತಾಂತರದ ನೆಪವೊಡ್ಡಿ ಕೋಮು ಪ್ರಚೋದಕ ಭಾಷಣ ಮಾಡಿದ ಡಾ.ಪ್ರಭಾಕರ ಭಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.
ಅಲ್ಲದೆ, ಸಾಮಾಜಿಕ ಕಾರ್ಯಕರ್ತ ಇಸ್ಮಾಯೀಲ್‌ರನ್ನು ಕೊಲೆ ಮಾಡಿದ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಬಗ್ಗೆ ಅವಹೇಳನ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಮತ್ತು ಮಾಜಿ ಸಂಸದ್ ಸದಸ್ಯೆ ರಮ್ಯಾರ ಬುರ್ಖಾಧಾರಿಯಾಗಿ ಕೆನ್ನೆಯಲ್ಲಿ ಪಾಕಿಸ್ಥಾನದ ಧ್ವಜವನ್ನು ಮುದ್ರಿಸಿ ಅವಹೇಳನ ಮಾಡಿದ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವಂತೆ ಲೀಗ್‌ನ ಪ್ರಧಾನ ಕಾರ್ಯದರ್ಶಿ ಬಶೀರ್ ಉಳ್ಳಾಲ ಒತ್ತಾಯಿಸಿದ್ದಾರೆ.