×
Ad

ಆರೆಸ್ಸೆಸ್‌ಗೆ ಹೊಸ ಸಮವಸ್ತ್ರ

Update: 2016-09-28 19:49 IST

ಜೈಪುರ, ಸೆ.28: ಆರೆಸ್ಸೆಸ್ ತನ್ನ ಹೊಸ ಸಮವಸ್ತ್ರದ ಮಾರಾಟವನ್ನು ಮಂಗಳವಾರ ಆರಂಭಿಸಿದೆ. ವಿಜಯದಶಮಿಯ ದಿನ ಸ್ವಯಂಸೇವಕರು ಅದನ್ನು ಧರಿಸಲಿದ್ದಾರೆ. ಬಿಳಿ ಅಂಗಿ, ಕಂದು ಪ್ಯಾಂಟ್ ಹಾಗೂ ಕಂದು ಕಾಲುಚೀಲಗಳು ಸಂಘದ ಹೊಸ ಸಮವಸ್ತ್ರವಾಗಿದೆ.

ಹಿರಿಯ ಆರೆಸ್ಸೆಸ್ ಸ್ವಯಂಸೇವಕ ಸತ್ಯನಾರಾಯಣ್, ಹೊಸ ಸಮವಸ್ತ್ರವನ್ನು ಪ್ರದರ್ಶಿಸಿ, ಮಾರಾಟವನ್ನು ಆರಂಭಿಸಿದ್ದಾರೆ.
ವಿಜಯದಶಮಿಯ ದಿನ ಆರೆಸ್ಸೆಸ್‌ನ ಜೈಪುರ ಘಟಕದಿಂದ ಪಥ ಸಂಚಲನೆ ನಡೆಯಲಿದೆ. ಅದರಲ್ಲಿ ಹೊಸ ಸಮವಸ್ತ್ರ ಧರಿಸಿದ 10 ಸಾವಿರ ಸ್ವಯಂಸೇವಕರು ಭಾಗವಹಿಸಲಿದ್ದಾರೆಂದು ರಾಜಸ್ಥಾನದ ಪ್ರಚಾರ ಪ್ರಮುಖ್ ಮಹೇಂದ್ರ ಸಿಂಘಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News