ಸುನ್ನೀ ಸಂದೇಶ ಮೊಹರಂ ವಿಶೇಷಾಂಕ’ ಬಿಡುಗಡೆ
Update: 2016-09-28 20:59 IST
ಮಂಗಳೂರು, ಸೆ. 28: ಕರ್ನಾಟಕ ಇಸ್ಲಾಮೀ ಸಾಹಿತ್ಯ ಅಕಾಡೆಮಿ (ಕಿಸಾ) ಪ್ರತೀ ತಿಂಗಳು ಹೊರತರುವ ‘ಸುನ್ನೀ ಸಂದೇಶ’ ಪತ್ರಿಕೆಯ ಮೊಹರಂ ವಿಶೇಷ ಸಂಚಿಕೆಯು ಇಂದು ನಗರದ ಕಚೇರಿಯಲ್ಲಿ ಬಿಡುಗಡೆಗೊಂಡಿತು.
ಕರ್ನಾಟಕ ಇಸ್ಲಾಮೀ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷ ಎ.ಎಚ್.ನೌಷಾದ್ ಹಾಜಿ ಸೂರಲ್ಪಾಡಿರವರಿಗೆ ಸುನ್ನೀ ಸಂದೇಶ ಡೈರೆಕ್ಟರ್ ಸಿತಾರ್ ಅಬ್ದುಲ್ ಮಜೀದ್ ಹಾಜಿ ವಿಶೇಷಾಂಕದ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಎಲ್. ಉಮರ್ ದಾರಿಮಿ, ಸಂಪಾದಕರಾದ ಕೆ.ಎಸ್. ಹೈದರ್ ದಾರಿಮಿ, ಕುಕ್ಕಿಲ ದಾರಿಮಿ, ಸಿದ್ದೀಕ್ ಫೈಝಿ, ಬಶೀರ್ ಅಝ್‌ಹರಿ ಬಾಯಾರ್, ಮುಸ್ತಫಾ ಫೈಝಿ ಕಿನ್ಯ, ಅಬ್ದುಲ್ಲ ಬೆಳ್ಮ ಮೊದಲಾದವರು ಉಪಸ್ಥಿತರಿದ್ದರು.
15 ವರ್ಷವನ್ನು ಪೂರೈಸುವ ‘ಸುನ್ನೀ ಸಂದೇಶ’ವು ಮುಂದಿನ ವರ್ಷದಿಂದ ವಾರಪತ್ರಿಕೆಯಾಗಿ ಹೊರಬರಲಿದೆ ಎಂದು ವ್ಯವಸ್ಥಾಪಕ ಮುಸ್ತಫಾ ಫೈಝಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.