×
Ad

ಯುನಿವೆಫ್‌ನಿಂದ ಚಿಂತನ ಮಂಥನ

Update: 2016-09-28 22:08 IST

ಮಂಗಳೂರು, ಸೆ.28: ಯುನಿವೆಫ್ ಕರ್ನಾಟಕದ ವತಿಯಿಂದ ಶಾಂತಿ, ಸಮಾನತೆ, ಸಹಬಾಳ್ವೆ ಮತ್ತು ಸಹಿಷ್ಣು ಸಮಾಜ ನಿರ್ಮಾಣದ ಗುರಿಯೊಂದಿಗೆ ಕಳೆದ ಹತ್ತು ವರ್ಷಗಳಿಂದ ಸ್ನೇಹ ಸಂವಾದ ಎಂಬ ಅಂತರ್ಧರ್ಮೀಯ ಸಂವಾದ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ದಶಮಾನೋತ್ಸವ ನಡೆಯಲಿದೆ.

ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಸರ್ವಧರ್ಮೀಯರನ್ನು ಸೇರಿಸಿ, ಹೊಸ ಚಿಂತನೆಯ ರೂಪದಲ್ಲಿ ಅಲ್ಲಲ್ಲಿ ಚಿಂತನ ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸೆ.29ರಂದು ಉಳ್ಳಾಲದ ನಿಮ್ರಾ ಮಸೀದಿಯಲ್ಲಿ ರಾತ್ರಿ 8ಗಂಟೆಗೆ ಉದ್ಘಾಟನೆಗೊಳ್ಳಲಿರುವ ಈ ಚಿಂತನ ಮಂಥನ ಕಾರ್ಯಕ್ರಮವು ಸೆ.30ರಂದು ಳ್ನೀರಿನಲ್ಲಿರುವ ದಾರುಲ್ ಇಲ್ಮ್‌ನಲ್ಲಿ, ಅ.7ರಂದು ಶುಕ್ರವಾರ ಕುದ್ರೋಳಿ ಉರ್ದು ಶಾಲೆಯಲ್ಲಿ ಹಾಗೂ ಅ.14ರಂದು ಬೋಳಾರದಲ್ಲಿ ನಡೆಯಲಿದೆ.

ಅ.28ರಂದು ಸಂಜೆ 6:30ಕ್ಕೆ ಬಲ್ಮಠ ಮಿಶನ್ ಕಂಪೌಂಡ್ ನಲ್ಲಿರುವ ಶಾಂತಿನಿಲಯದಲ್ಲಿ ಸ್ನೇಹ ಸಂವಾದ ಅಂತರ್ಧರ್ಮೀಯ ಸಂವಾದ ಕಾರ್ಯಕ್ರಮದೊಂದಿಗೆ ಸಮಾಪನಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುನಿವೆಫ್ ಕಾರ್ಯದರ್ಶಿ ಹಾಗೂ ಈ ಕಾರ್ಯಕ್ರಮಗಳ ಸಂಚಾಲಕ ಯು.ಕೆ. ಖಾಲಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News