×
Ad

ಗ್ರಾಪಂ ಅಧ್ಯಕ್ಷನ ಮೇಲೆ ಹಲ್ಲೆ

Update: 2016-09-28 22:55 IST

ಕೋಟ, ಸೆ.28: ಆಶ್ರಯ ಮನೆಯ ಹಂಚಿಕೆಯ ವಿಚಾರದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೆಳಗೋಡು ನಿವಾಸಿ ಉದಯ ಕುಲಾಲ್ (35) ಎಂಬವರಿಗೆ ಹಲ್ಲೆ ನಡೆಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.27ರಂದು ಮೊಳಹಳ್ಳಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕರೆಯ ಲಾದ ವಿಶೇಷ ಗ್ರಾಮಸಭೆಗಾಗಿ ಕಚೇರಿಗೆ ಆಗಮಿಸಿ ತನ್ನ ಚೇಂಬರ್‌ನಲ್ಲಿದ್ದ ಅಧ್ಯಕ್ಷ ಉದಯ ಕುಲಾಲ್‌ಗೆ ಮೊಳಹಳ್ಳಿ ದಿನೇಶ್ ಹೆಗ್ಡೆ, ಹೊರ್ನಾಡಿ ಉದಯ ಕುಮಾರ್ ಶೆಟ್ಟಿ, ಮಾಸ್ತಿಕಟ್ಟೆ ಉದಯ ಶೆಟ್ಟಿ, ವಾಣಿ ಆರ್. ಶೆಟ್ಟಿ, ದೇವಲ್ಬೆಟ್ಟು ಚಂದ್ರಶೇಖರ ಶೆಟ್ಟಿ ಎಂಬವರು ಕಬ್ಬಿಣದ ರಾಡ್‌ನಿಂದ ಹೊಡೆಯಲು ಯತ್ನಿಸಿ ಬಳಿಕ ಕೈಯಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News