×
Ad

ವೃದ್ಧೆಯ ಸರ ಅಪಹರಣ

Update: 2016-09-28 23:10 IST

ಮಂಗಳೂರು, ಸೆ.28: ಮುಂಜಾನೆ ವಾಕಿಂಗ್‌ಗೆ ತೆರಳುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಅಪರಿಚಿತರು ಕಸಿದು ಪರಾರಿಯಾಗಿರುವ ಘಟನೆ ಕದ್ರಿ ಸಮೀದ ಬುಧವಾರ ನಡೆದಿದೆ.

ಸರ ಕಳಕೊಂಡ ವೃದ್ಧೆಯನ್ನು ಕದ್ರಿ ನಿವಾಸಿ ನಾಗರತ್ನಮ್ಮ (60) ಎಂದು ಗುರುತಿಸಲಾಗಿದೆ.

ನಾಗರತ್ನಮ್ಮ ಎಂದಿನಂತೆ ಬುಧವಾರವೂ ಬೆಳಗ್ಗೆ ಕದ್ರಿ ರಸ್ತೆಯಲ್ಲಿ ವಾಕಿಂಗ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತ ಇಬ್ಬರು ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಕದ್ರಿ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ಜಿ. ನಾಯಕ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News