ಅಧಿಕೃತವಾಗಿ ಉತ್ಪಾದನೆ ನಿಲ್ಲಿಸಿದ ಬ್ಲ್ಯಾಕ್ ಬೆರಿ

Update: 2016-09-28 18:01 GMT

ಟೊರಂಟೋ, ಸೆ.28: ಮತ್ತೊಂದು ನಷ್ಟದ ಹೊಡೆತ ಮತ್ತು ಆದಾಯದಲ್ಲಿ ತೀವ್ರ ಇಳಿಮುಖ ಕಂಡು ಬಂದ ಹಿನ್ನೆಲೆಯಲ್ಲಿ ಕೆನಡಾ ಮೂಲದ ಬ್ಲಾಕ್‌ಬೆರಿ ಕಂಪೆನಿಯು ತನ್ನ ಹೆಗ್ಗಳಿಕೆಯಾದ ‘ಬ್ಲಾಕ್‌ಬೆರಿ’ ಸ್ಮಾರ್ಟ್‌ಫೋನ್, ಹಾರ್ಡ್‌ವೇರ್ ಸೇರಿದಂತೆ ಎಲ್ಲಾ ಉತ್ಪನ್ನಗಳ ತಯಾರಿಕೆಯನ್ನು ಹೊರಗುತ್ತಿಗೆ ನೀಡಲು ನಿರ್ಧರಿಸಿದೆ.

ಒಂದು ವರ್ಷದ ಹಿಂದೆ ಸಂಸ್ಥೆಯು 51 ಮಿಲಿಯನ್ ಡಾಲರ್ ಲಾಭ ದಾಖಲಿಸಿತ್ತು. ಆದರೆ ಈಗ ಸಂಸ್ಥೆಯ ನಿವ್ವಳ ನಷ್ಟ 372 ಮಿಲಿಯನ್ ಡಾಲರ್‌ಗೆ ಏರಿದೆ. ಅಲ್ಲದೆ ಪ್ರಧಾನ ಹಣಕಾಸು ಅಧಿಕಾರಿ ಜೇಮ್ಸ್ ಯೆರ್ಷ್ ಅವರು ವೈಯಕ್ತಿಕ ಕಾರಣದಿಂದ ಅ.1ರಿಂದ ಅನ್ವಯವಾಗುವಂತೆ ಹುದ್ದೆ ತೊರೆಯಲಿದ್ದು ‘ಸೈಬೇಸ್’ನ ಮಾಜಿ ಅಧಿಕಾರಿ ಸ್ಟೀವನ್ ಕ್ಯಾಪೆಲಿ ಅವರು ಈ ಹುದ್ದೆಗೆ ನೇಮಕವಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಂಸ್ಥೆಯ ಶೇರು ದರ ಏರಿಕೆಯನ್ನು ಕಂಡಿದ್ದು ಶೇ.6.7ರಿಂದ ಶೇ.8.35ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News