×
Ad

ತಾಯಿ ಪ್ರೀತಿ ವಂಚನೆ ಮಕ್ಕಳ ಅಡ್ಡದಾರಿಗೆ ಕಾರಣ

Update: 2016-09-28 23:50 IST

ಪುತ್ತೂರು, ಸೆ.28: ಹೆತ್ತವರಲ್ಲಿ ತಂದೆಗಿಂತಲೂ ತಾಯಿಯ ಪ್ರೀತಿ ಮಕ್ಕಳಿಗೆ ಹೆಚ್ಚು ಪ್ರಭಾವಿತವಾಗುತ್ತದೆ. ಯಾವಾಗ ತಾಯಿಯ ಪ್ರೀತಿ ಮಕ್ಕಳಿಗೆ ವಂಚಿತವಾಗುತ್ತದೋ ಆಗ ಮಕ್ಕಳು ಅಡ್ಡದಾರಿ ಹಿಡಿಯಲು ಕಾರಣವಾಗುತ್ತದೆ. ಹೆಣ್ಣು ಮಕ್ಕಳ ಮೇಲೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕಿದ್ದು, ಗಂಡು ಮತ್ತು ಹೆಣ್ಣು ಮಕ್ಕಳನ್ನು ತಾರತಮ್ಯವಿಲ್ಲದೇ ಸಮಾನವಾಗಿ ಬೆಳೆಸಬೇಕಿದೆ ಎಂದು ಆಲ್ ಇಂಡಿಯಾ ಕ್ರೈಮ್ ಪ್ರಿವೆನ್‌ಶನ್ ಸೊಸೈಟಿ ಇಂಡಿಯಾದ ದ.ಕ. ಜಿಲ್ಲಾ ವೈಸ್ ಗವರ್ನರ್ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕಸ್ತೂರಿ ಬೊಳುವಾರು ಹೇಳಿದರು.
ಕಾವು ಸುವರ್ಣ ಗ್ರಾಮೋದಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಅರಿಯಡ್ಕ ಗ್ರಾಪಂ ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸಭೆಯನ್ನು ಉದ್ಘಾಟಿಸಿದರು.ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸವಿತಾ ಎಸ್. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಶಶಿಕಲಾ ಚೌಟ ಅವರು ಕಸ್ತೂರಿ ಬೊಳುವಾರು ಅವರನ್ನು ಪರಿಚಯಿಸಿದರು.
ಶಿಶು ಅಭಿವೃದ್ದಿ ಯೋಜನೆ ಪುತ್ತೂರು ಇದರ ಮೇಲ್ವಿಚಾರಕಿ ವಿಜಯಲಕ್ಷ್ಮೀ ಕೆ., ಅರಿಯಡ್ಕ ಗ್ರಾಪಂ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸದಸ್ಯರಾದ ತಿಲಕ್ ರೈ ಕುತ್ಯಾಡಿ, ಚಿತ್ರಾ ಎನ್. ನಾಯ್ಕಾ, ಸೀತಾರಾಮ ಮೇಲ್ಪಾದೆ, ಹೊನ್ನಪ್ಪ ಪೂಜಾರಿ, ನವೀನ ಬಿ.ಡಿ., ಸಲ್ಮಾ, ನಳಿನಾಕ್ಷಿ, ಗ್ರಾಪಂ ಕಾರ್ಯದರ್ಶಿ ಟಿ.ಕೃಷ್ಣರಾಜ್, ಲೆಕ್ಕ ಸಹಾಯಕ ರವೀಂದ್ರ ಪಾಟೀಲ್ ಉಪಸ್ಥಿತರಿದ್ದರು.
ಪಿಡಿಒ ಅಜಿತ್ ಜಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News