×
Ad

ಯುನಿವೆಫ್‌ನಿಂದ ಚಿಂತನ ಮಂಥನ

Update: 2016-09-28 23:55 IST

ಮಂಗಳೂರು, ಸೆ.28: ಯುನಿವೆಫ್ ಕರ್ನಾಟಕ ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿರುವ ಅಂತರ್ಧರ್ಮೀಯ ಸಂವಾದ ಕಾರ್ಯಕ್ರಮ ‘ಸ್ನೇಹ ಸಂವಾದ’ ಈ ವರ್ಷ ದಶಮಾನೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೆ.29ರಂದು ಉಳ್ಳಾಲದ ನಿಮ್ರಾ ಮಸೀದಿಯಲ್ಲಿ ರಾತ್ರಿ 8 ಕ್ಕೆ ಉದ್ಘಾಟನೆಯಾಗುವ ಚಿಂತನ ಮಂಥನ ಕಾರ್ಯಕ್ರಮವು ಸೆ.30ರಂದು ಫಳ್ನೀರಿನಲ್ಲಿರುವ ದಾರುಲ್ ಇಲ್ಮ್‌ನಲ್ಲಿ, ಅ.7ರಂದು ಶುಕ್ರವಾರ ಕುದ್ರೋಳಿ ಉರ್ದು ಶಾಲೆಯಲ್ಲಿ ಹಾಗೂ ಅ.14ರಂದು ಬೋಳಾರದಲ್ಲಿ ನಡೆಯಲಿದೆ.
ಅ.28ರಂದು ಸಂಜೆ 6.30ಕ್ಕೆ ಬಲ್ಮಠ ಮಿಶನ್ ಕಂಪೌಂಡ್ ನಲ್ಲಿರುವ ಶಾಂತಿನಿಲಯದಲ್ಲಿ ಸ್ನೇಹ ಸಂವಾದ ಅಂತರ್ಧರ್ಮೀಯ ಸಂವಾದ ಕಾರ್ಯಕ್ರಮದೊಂದಿಗೆ ಸಮಾಪನಗೊಳ್ಳಲಿದೆ ಎಂದು ಕಾರ್ಯಕ್ರಮಗಳ ಸಂಚಾಲಕ ಯು.ಕೆ.ಖಾಲಿದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News