×
Ad

ಅ.2ರಂದು ರಜತ ಮಹೋತ್ಸವ

Update: 2016-09-28 23:55 IST

ಮಂಗಳೂರು, ಸೆ.28: ನಗರದ ಮರಾಠಿ ಮಂಡಲದ ರಜತಮಹೋತ್ಸವ ಸಮಾರಂಭವು ಅ.2 ರಂದು ಸಂಜೆ 4ಕ್ಕೆ ಮಲ್ಲಿಕಟ್ಟೆಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಭಾ ಕಾರ್ಯಕ್ರಮದಲ್ಲಿ ಕಾರ್ಪ್ ಬ್ಯಾಂಕ್ ಉಪಮಹಾಪ್ರಬಂಧಕ ದಿಲೀಪ್ ಟಿ.ಶ್ರೀಪಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಅಚಲ್ ಇಂಡಸ್ಟ್ರೀಸ್‌ನ ಮುಖ್ಯಪ್ರಬಂಧಕ ಎಂ.ಎನ್.ಪೈ ಅಧ್ಯಕ್ಷತೆ ವಹಿಸುವರು. ಸನ್ಮಾನ ಹಾಗೂ ಬೆಳಗಾವಿ ನಾಟಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಂಗಳೂರು ಮರಾಠಿ ಮಂಡಲದ ಅಧ್ಯಕ್ಷ ಪ್ರಸಾದ್ ಕ್ಷೀರಸಾಗರ್ ತಿಳಿಸಿದ್ದಾರೆ.
ಕಾರ್ಯದರ್ಶಿ ನಿವೇದಿತಾ ಮಿರಾಜ್‌ಕರ್ ಮತ್ತು ಸುಮನ್‌ಚಂದ್ ಸಾಗರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News