ತಂದೆಯನ್ನು ಗುಂಡುಹಾರಿಸಿ ಕೊಂದ ಮಗ
ಚಾರ್ಲ್ಸ್‌ಸ್ಟನ್, ಸೆ.29: ದಕ್ಷಿಣ ಕ್ಯಾರೊಲಿನಾದ 14ರ ಹರೆಯದ ಬಾಲಕನೊಬ್ಬ ಹ್ಯಾಂಡ್‌ಗನ್‌ನಿಂದ ತನ್ನ ತಂದೆಯನ್ನು ಗುಂಡಿಟ್ಟು ಸಾಯಿಸಿದ್ದಲ್ಲದೆ, ಆ ನಂತರ ಅದೇ ಪ್ರದೇಶದ ಶಾಲೆಯೊಂದಕ್ಕೆ ನುಗ್ಗಿ ಗುಂಡು ಹಾರಾಟ ನಡೆಸಿ ಇಬ್ಬರು ಶಾಲಾಮಕ್ಕಳು ಹಾಗೂ ಶಿಕ್ಷಕಿಯೊಬ್ಬರಿಗೆ ಗಾಯಗೊಳಿಸಿದ ಘಟನೆ ಬುಧವಾರ ನಡೆದಿದೆ.
ಅಗ್ನಿ ಶಾಮಕ ದಳದ ಸ್ವಯಂಸೇವಕ ಜಮ್ಮಿ ಬ್ರೊಕ್ ಎಂಬಾತ ಜೀವದ ಹಂಗು ತೊರೆದು ಗುಂಡುಹಾರಾಟ ನಿರತ ಬಾಲಕನನ್ನು ಶಾಲೆಯ ಮೈದಾನದಲ್ಲಿ ಹಿಡಿದಿಟ್ಟುಕೊಂಡು ಶಾಲೆಯೊಳಗೆ ಪ್ರವೇಶಿಸದಂತೆ ನೋಡಿಕೊಂಡ. ಪೊಲೀಸರು ಬರುವ ತನಕ ತನ್ನ ಹಿಡಿತದಲ್ಲೇ ಇಟ್ಟುಕೊಂಡು ದೊಡ್ಡ ಅನಾಹುತವಾಗುವುದನ್ನು ತಪ್ಪಿಸಿದ.
ಬಾಲಕ ಮೊದಲಿಗೆ ತನ್ನ ತಂದೆ 47ರ ಹರೆಯದ ಜೆಫ್ರಿ ಡೆವಿಟ್‌ರ ಎದೆಗೆ ಗುಂಡಿಟ್ಟು ಸಾಯಿಸಿದ್ದಾನೆ. ಆ ಬಳಿಕ ಪಿಕ್‌ಅಪ್ ಟ್ರಕ್‌ನ್ನು 2 ಕಿ.ಮೀ. ದೂರ ಚಲಾಯಿಸಿಕೊಂಡು ಶಾಲೆಯೊಂದರ ಮೈದಾನದ ಆವರಣ ಗೋಡೆಗೆ ವಾಹನವನ್ನು ಢಿಕ್ಕಿ ಹೊಡೆಸಿದ್ದಾನೆ. ಮೈದಾನದಲ್ಲಿದ್ದ ಶಾಲಾ ಮಕ್ಕಳ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ ವಿದ್ಯಾರ್ಥಿಯೊಬ್ಬನ ಕಾಲಿನ ಗಾಯವಾದರೆ, ಮತ್ತೊಬ್ ವಿದ್ಯಾರ್ಥಿಯ ಕೈಗೆ ಗಾಯವಾಗಿದೆ. ಗುಂಡೇಟು ತಿಂದ ಇಬ್ಬರು ವಿದ್ಯಾರ್ಥಿಗಳು ಬಿಳಿಯರು. ಶಾಲಾ ಶಿಕ್ಷಿಕಿಯ ಮೇಲೆ ಬಾಲಕ ಗುಂಡು ಹಾರಿಸಿದ್ದು, ಆ ಮೂವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡು ಹಾರಾಟ ನಡೆಸಿದ ಬಾಲಕನ ಹೆಸರು ಏನೆಂದು ಇನ್ನೂ ಗೊತ್ತಾಗಿಲ್ಲ. ಗುಂಡು ಹಾರಾಟ ನಡೆಸಿದ್ದು ಏಕೆ ಎಂದು ತಿಳಿದುಬಂದಿಲ್ಲ.