ಮೊಬೈಲ್ ಸ್ಫೋಟದ ಬಳಿಕ ಸ್ಯಾಮ್ಸಂಗ್ ವಾಶಿಂಗ್ ಮೆಶೀನ್ ಸರದಿ

Update: 2016-09-29 06:34 GMT

ವಾಷಿಂಗ್ಟನ್, ಸೆ.29: ಇತ್ತೀಚೆಗೆ ಸ್ಯಾಮ್ಸಂಗ್ ಕಂಪೆನಿಯ ಕೆಲವು ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್ ಫೋನುಗಳ ಬ್ಯಾಟರಿ ಸ್ಫೋಟಗೊಂಡ ವರದಿಗಳ ಹಿನ್ನೆಲೆಯಲ್ಲಿ ಕಂಪೆನಿ ಅವುಗಳನ್ನು ಹಿಂಪಡೆದಿರುವಂತೆಯೇ ಈಗ ಕೆಲ ಸ್ಯಾಮ್ಸಂಗ್ ಫ್ರಂಟ್ ಲೋಡಿಂಗ್ ವಾಶಿಂಗ್ ಮೆಶೀನ್ಗಳು ಸ್ಫೋಟಗೊಂಡಿವೆಯೆಂದು ಹೇಳಲಾಗುತ್ತಿದೆ.

ಅಮೆರಿಕಾದ ಅಧಿಕಾರಿಗಳು ಈಗಾಗಲೇ ಸ್ಯಾಮ್ಸಂಗ್ ವಾಶಿಂಗ್ ಮೆಶೀನ್ ಹೊಂದಿರುವವರನ್ನು ಈ ಬಗ್ಗೆ ಎಚ್ಚರಿಸಿದ್ದಾರೆ.
ಮಾರ್ಚ್ 2011ರಿಂದ ಎಪ್ರಿಲ್ 2016ರ ನಡುವೆ ಉತ್ಪಾದಿಸಲ್ಪಟ್ಟ ವಾಶಿಂಗ್ ಮೆಶೀನ್ ಳ ಬಗ್ಗೆ ಅಮೆರಿಕಾದ ಕನ್ಸ್ಯೂಮರ್ ಪ್ರಾಡಕ್ಟ್ ಸೇಫ್ಟಿ ಕಮಿಷನ್ ಎಚ್ಚರಿಕೆ ನೀಡಿದ್ದು, ಯಾವ ಮಾಡೆಲ್ ಎಂದು ಮಾತ್ರ ಅದು ನಮೂದಿಸಿಲ್ಲ.
ಈ ವಾಶಿಂಗ್ ಮೆಶಿನ್ ಹೊಂದಿರುವ ಗ್ರಾಹಕರು ಬೆಡ್ಶೀಟ್ ಮುಂತಾದ ಭಾರದ ಬಟ್ಟೆಗಳನ್ನು ಒಗೆಯಲು ಹಾಕುವಾಗ ಕಡಿಮೆ ಸ್ಪಿನ್ ಸ್ಪೀಡ್ ಉಪಯೋಗಿಸಬೇಕೆಂದೂ ಹೀಗೆ ಮಾಡಿದರೆ ಏನಾದರೂ ಸಮಸ್ಯೆ ಎದುರಾದರೂ ಹೆಚ್ಚಿನ ಹಾನಿಯುಂಟಾಗದು, ಎಂದು ಕಮಿಷನ್ ಸಲಹೆ ನೀಡಿದೆ. ತಾನೀಗಾಗಲೇ ಸ್ಯಾಮ್ಸಂಗ್ ಕಂಪೆನಿಯನ್ನು ಸಂಪರ್ಕಿಸಿದ್ದು, ಸೂಕ್ತ ಪರಿಹಾರೋಪಾಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ ಎಂದು ಅದು ಹೇಳಿದೆ.
ಸ್ಯಾಮ್ಸಂಗ್ ವಾಶಿಂಗ್ ಮೆಶೀನುಗಳುನ್ನ್ನು ಹೊಂದಿರುವ ಟೆಕ್ಸಾಸ್, ಜಾರ್ಜಿಯಾ ಹಾಗೂ ಇಂಡಿಯಾನ ಇಲಿ್ಲನ ಕೆಲವರು ತಮ್ಮ ವಾಶಿಂಗ್ ಮೆಶಿನ್ ಸ್ಫೋಟಗೊಂಡಿದೆ ಎಂದು ದೂರಿ ಕಂಪೆನಿಯ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಂಡ ಒಂದು ತಿಂಗಳ ತರುವಾಯ ಕನ್ಸ್ಯೂಮರ್ ಪ್ರಾಡಕ್ಟ್ ಸೇಫ್ಟಿ ಕಮಿಷನ್ ಈ ಎಚ್ಚರಿಕೆ ನೀಡಿದೆ.
ಒಂದು ಪ್ರಕರಣದಲ್ಲಿ ವಾಶಿಂಗ್ ಮೆಶೀನ್ ಸ್ಫೋಟದಿಂದ ಗ್ಯಾರೇಜ್ ಒಂದರ ಗೋಡೆಗೆ ಹಾನಿಯಾಗಿತ್ತು. ಇನ್ನೊಂದು ಪ್ರಕರಣದಲ್ಲಿ ದೊಡ್ಡ ಬಾಂಬ್ ಸ್ಫೋಟವಾದಂತೆ ಸದ್ದು ಬಂದಿತ್ತೆಂದು ಗ್ರಾಹಕರೊಬ್ಬರು ಹೇಳಿದ್ದಾರೆ.
ನ್ಯೂಜೆರ್ಸಿಯ ನ್ಯಾಯಾಲಯವೊಂದರಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಕಂಪೆನಿ ನಿರಾಕರಿಸಿದೆ. ‘‘ಕೆಲವೊಂದು ವಿರಳ ಪ್ರಕರಣಗಳಲ್ಲಿ ದೊಡ್ಡ ಗಾತ್ರದ ಹಾಗೂ ಭಾರದ ಬಟ್ಟೆಗಳನ್ನು ವಾಶಿಂಗ್ ಮೆಶೀನಿನಲ್ಲಿ ಹಾಕಿದಾಗ ತೀವ್ರ ಕಂಪನ ಉಂಟಾಗಿ ಕೆಲವರಿಗೆ ಗಾಯಗಳಾಗಬಹುದು. ಆದರೆ ನಮ್ಮ ವಾಶಿಂಗ್ ಮೆಶೀನುಗಳು 2011 ರಿಂದ ಮಿಲಿಯಗಟ್ಟಲೆ ಲೋಡ್ ಬಟ್ಟೆಗಳನ್ನು ಒಗೆದಿದೆ’’ ಎಂದು ಕಂಪೆನಿಯ ವೆಬ್ ಸೈಟ್ ನಲ್ಲಿನ ಹೇಳಿಕೆಯೊಂದು ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News