×
Ad

ಸಾಗವಾನಿ ಮರಗಳನ್ನು ಕಡಿಯುತ್ತಿದ್ದ ಇಬ್ಬರು ಅರಣ್ಯ ರಕ್ಷಕರ ಬಲೆಗೆ

Update: 2016-09-29 16:13 IST

ಮುಂಡಗೋಡ, ಸೆ.29: ಕರಗಿನಕೊಪ್ಪ ಗ್ರಾಮ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ತುಂಡುಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಇತರ ಮೂವರು ಪರಾರಿಯಾಗಿದ್ದಾರೆ.
ಜೋಗೇಶ್ವರ ಹಳ್ಳದ ಬಾಗು ಬೆಂಡು ಡೂಯಿಪಡೆ,ಲಕ್ಕು ಧೂಳು ಯಮಕರ ಬಂಧಿತ ಆರೋಪಿಗಳು. ಪರಾರಿಯಾದವರನ್ನು ಮಂಜುನಾಥ ಲಮಾಣಿ, ಸುರೇಶ ಲಮಾಣಿ ಮತ್ತು ದೊಂಡು ತೋರವತ್ ಎಂದು ಹೇಳಲಾಗಿದೆ.
ವಲಯ ಅರಣ್ಯಾಧಿಕಾರಿ ವಿರೇಶ ಕಬ್ಬಿನ ಮಾರ್ಗದರ್ಶನದಲ್ಲಿ ವನಪಾಲಕರಾದ ಡಿ.ಬಿ.ಪಠಾಣ, ನಾಗರಾಜ ಕಲಾಲ, ಬಸವರಾಜ ಪೂಜಾರ, ಅರಣ್ಯ ರಕ್ಷಕರಾದ ಶ್ರೀಧರ ಭಜಂತ್ರಿ, ಬಸವರಾಜ ನಾಯ್ಕ ಈ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳಿಂದ ಬಳಿಯಿಂದ ಸುಮಾರು 40 ಸಾವಿರ ರೂ. ವೌಲ್ಯದ ಸಾಗವಾನಿ ಮರಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News