ಮದ್ಯ ಸೇವನೆಯಿಂದ ಅಪರಾಧ ಹೆಚ್ಚಳ: ಚಂದ್ರಶೇಖರ್

Update: 2016-09-29 12:21 GMT

ಸುಳ್ಯ, ಸೆ.29: ಸುಳ್ಯದಲ್ಲಿ ನಡೆಯುತ್ತಿರುವ 1000ನೆ ಮದ್ಯವರ್ಜನ ಶಿಬಿರದಲ್ಲಿ ನಾಗರಿಕ ಪ್ರಜ್ಞೆಯ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.
ಸುಳ್ಯ ಎಸ್ಸೈ ಚಂದ್ರಶೇಖರ್ ಮಾಹಿತಿ ನೀಡಿದರು.

ಕಷ್ಟಪಟ್ಟು ದುಡಿಯವ ಕಾರ್ಮಿಕ ವರ್ಗ ಮದ್ಯ ವ್ಯಸನಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದು, ಮದ್ಯ ಸೇವನೆಯಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಕುಟುಂಬದ ನೆಮ್ಮದಿ ಹಾಳಾಗುತ್ತಿದೆ. ಮದ್ಯಮುಕ್ತರಾಗುವುದರಿಂದ ಆರೋಗ್ಯ ಸುಧಾರಣೆಯೊಂದಿಗೆ ಆರ್ಥಿಕ ಸ್ಥಿತಿ ಹಾಗೂ ಕುಟುಂಬಕ್ಕೆ ನೆಮ್ಮದಿ ಸಿಗುತ್ತಿದೆ. ಊರೂ ಒಳ್ಳೆಯದಾಗುತ್ತದೆ ಎಂದ ಅವರು ಹೆಚ್ಚುವರಿ ಮದ್ಯದಂಗಡಿ ತೆರೆಯಲು ಜನರು ಅವಕಾಶ ನೀಡಬಾರದು. ಮದ್ಯಕ್ಕೆ ಕಡಿವಾಣ ಹಾಕುವ ಮೂಲಕ ಸರಕಾರಗಳು ಜನರ ಋಣವನ್ನು ತೀರಿಸಬೇಕಾಗಿದೆ ಎಂದವರು ಹೇಳಿದರು.

ಪುತ್ತೂರು ಜನಜಾಗೃತಿ ವೇದಿಕೆಯ ಶಶಿಕುಮಾರ್ ರೈ ಬಾಳ್ಯೊಟ್ಟು, ಸ್ವಾಸ್ಥ ಸಂಕಲ್ಪ ಹಾಗೂ ಮದ್ಯವರ್ಜನ ಶಿಬಿರಗಳ ಸಂಘಟನೆಯ ಮೂಲಕ ಸುಳ್ಯ ತಾಲೂಕು ಪುತ್ತೂರು ತಾಲೂಕನ್ನು ಮೀರಿ ಕೆಲಸ ಮಾಡುತ್ತಿದೆ. ಇಲ್ಲಿ ಸಂಘಟನೆ ಉತ್ತಮವಾಗಿದೆ ಎಂದವರು ಪ್ರಶಂಸಿಸಿದರು.

ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಸಂಜಾಜೆ ವಲಯ ಜನಜಾಗೃತಿ ವೇದಿಕೆಯ ನಿಯೋಜಿತ ಅಧ್ಯಕ್ಷ ಜಗನ್ಮೋಹನ ರೈ, ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಕೆ.ಶೀನಪ್ಪ ಗೌಡ, ಜನಜಾಗೃತಿ ವೇದಿಕೆಯ ಸಂಪಾಜೆ ವಲಯಾಧ್ಯಕ್ಷ ಮಾಧವ ಗೌಡ ದೊಡ್ಡಿಹಿತ್ಲು, ಸುಳ್ಯ ಜನಜಾಗೃತಿ ವೇದಿಕೆಯ ಸದಸ್ಯರಾದ ರವಿಪ್ರಕಾಶ್ ಅಟ್ಲೂರು, ಲೋಕನಾಥ ಅಮೆಚೂರು, ರಾಜಾರಾಂ ಭಟ್, ಜಯರಾಮ ಜಾಲ್ಸೂರು, ಸತೀಶ್ ಕೂಜುಗೋಡು, ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆ ರತ್ನಾವತಿ ಅತಿಥಿಗಳಾಗಿದ್ದರು. ಮದ್ಯವರ್ಜನ ಸಮಿತಿ ಗೌರವಾಧ್ಯಕ್ಷ ಎಂ.ವೆಂಕಪ್ಪ ಗೌಡ, ಜನಜಾಗೃತಿ ವೇದಿಕೆಯ ಅಧ್ಯಕ್ಷೆ ವಿಮಲಾ ರಂಗಯ್ಯ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News