ಕಾಂಡೋಮ್ ಹಗರಣದ ಆರೋಪ ನಿರಾಧಾರ: ಸಚಿವ ಖಾದರ್
Update: 2016-09-29 19:52 IST
ಮಂಗಳೂರು, ಸೆ.29: ಬೆಂಗಳೂರು ಮಹಾನಗರಪಾಲಿಕೆಯ ಬಿಜೆಪಿ ಸದಸ್ಯರೋರ್ವರು ‘ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಲ್ಲಿ ಕಾಂಡೋಮ್ ಹಂಚಿಕೆಯಲ್ಲಿ 500 ಕೋಟಿ ರೂ. ಹಗರಣ ನಡೆದಿದೆ’ ಎಂದು ಆರೋಪಿಸಿರುವುದು ನಿರಾಧಾರವಾದದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ತನ್ನ ಮೇಲೆ ಮತ್ತು ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡಲಾಗಿದೆ. ಈ ಪ್ರಕ್ರಿಯೆ ನಡೆಯುವುದು ‘ನ್ಯಾಕೊ’ದ ಮೂಲಕ. ಇದು ಕೇಂದ್ರ ಸರಕಾರ ಮಾಡಬೇಕಾದದು ಎಂದು ತಿಳಿಸಿದರು.