ಸೇನಾ ಕಾರ್ಯಾಚರಣೆ: ರಾಜಕೀಯ ಮುಖಂಡರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ
Update: 2016-09-29 19:54 IST
ಹೊಸದಿಲ್ಲಿ,ಸೆ.29: ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರಕಾರದ ಪ್ರಯತ್ನಗಳ ಅಂಗವಾಗಿ ಗೃಹಸಚಿವ ರಾಜನಾಥ ಸಿಂಗ್ ಅವರು ಗುರುವಾರ ಪಶ್ಚಿಮ ಬಂಗಾಲ, ಒಡಿಶಾ, ಪಂಜಾಬ್ ಮತ್ತು ಬಿಹಾರಗಳ ಮುಖ್ಯಮಂತ್ರಿಗಳು ಹಾಗೂ ಹಲವಾರು ಪ್ರತಿಪಕ್ಷ ನಾಯಕರನ್ನು ಸಂಪರ್ಕಿಸಿ ಅವರಿಗೆ ನಿಯಂತ್ರಣ ರೇಖೆಯಾಚೆ ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಸೇನೆಯು ನಡೆಸಿದ ದಾಳಿಗಳ ಮಾಹಿತಿಯನ್ನು ನೀಡಿದರು.
ಸಿಂಗ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರೊಂದಿಗೂ ಮಾತನಾಡಿ ದಾಳಿಗಳ ಬಗ್ಗೆ ತಿಳಿಸಿದರು.