×
Ad

"ಹೃದಯ ಕಸಿ" ಭಾರತದ ಪರಿಸ್ಥಿತಿ ಹೇಗಿದೆ ?

Update: 2016-09-29 20:00 IST

ಹೊಸದಿಲ್ಲಿ, ಸೆ.29: ಮೂಲಸೌಕರ್ಯ ಕೊರತೆ, ಸಾಗಾಟ ತೊಂದರೆ, ಮಿಥ್ಯೆಗಳು ಹಾಗೂ ಕಳಂಕ ಭಾವನೆಗಳು ಅಂಗಾಂಗ ದಾನಕ್ಕೆ ದೊಡ್ಡ ಅಡಚಣೆಗಳಾಗಿವೆ. ಇದರಿಂದಾಗಿ ಭಾರತದಲ್ಲಿ ಹೃದಯ ಕಸಿಯ ಪ್ರಮಾಣ ಪಶ್ಚಿಮದೇಶಗಳಿಗಿಂತ ಭಾರೀ ಕಡಿಮೆಯಿದೆಯೆಂದು ಆರೋಗ್ಯ ಪರಿಣತರು ಅಭಿಪ್ರಾಯಿಸಿದ್ದಾರೆ.

ಹೃದಯದ ಕಾಯಿಲೆಗಳು ಜಾಗತಿಕವಾಗಿ ಮರಣಕ್ಕೆ ಒಂದನೆಯ ಕಾರಣವಾಗಿವೆ. ಇತರ ಕಾಯಿಲೆಗಳಿಗಿಂತ ಹೆಚ್ಚು ಸಾವುಗಳು ಇದರಿಂದಾಗುತ್ತವೆ.

ಇಂದು ಜಾಗತಿಕವಾಗಿ ವೈದ್ಯರು, ತಜ್ಞರು ಹಾಗೂ ನಾಗರಿಕ ಸಮಾಜಗಳು ವಿಶ್ವ ಹೃದಯ ದಿನವನ್ನು ಆಚರಿಸಿವೆ.

ಜೀವನ ಶೈಲಿಯ ಬದಲಾವಣೆಯಿಂದಾಗಿ ಯುವಕರು ಸಹಿತ ಹೆಚ್ಚಿನ ಜನರು ಹೃದ್ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಹಲವು ಜೀವಗಳನ್ನು ಉಳಿಸಬಲ್ಲ ಹೃದಯದಾನ ದೇಶದಲ್ಲಿನ್ನೂ ರೂಢಿಯಾಗಿಲ್ಲವೆಂದು ವೈದ್ಯರು ಹೇಳುತ್ತಾರೆ.

ಹೃದಯ ಕಸಿಗೆ ಸಂಬಂಧಿಸಿದಂತೆ ಭಾರತದ ದಾಖಲೆ ತೀರಾ ಕೆಳಗಿದೆ. ಇದಕ್ಕೆ ಮೂಲ ಸೌಕರ್ಯ ಕೊರತೆ ಮುಖ್ಯ ಕಾರಣವಾಗಿದೆ. ಐಸಿಯುಗಳಲ್ಲಿ ಅನೇಕ ವೇಳೆ ಮೆದುಳಿನ ಸಾವನ್ನು ಅಧಿಸೂಚಿಸುವುದಿಲ್ಲ. ಇದರಿಂದಾಗಿ ಅಮೂಲ್ಯ ಸಮಯ ಕಳೆದುಹೋಗುತ್ತದೆ. ಇದಲ್ಲದೆ, ಸಾಗಾಟ ಸಮಸ್ಯೆಯಿಂದಾಗಿ ಲಭ್ಯ ಹೃದಯವೂ ಸರಿಯಾದ ಸಮಯದಲ್ಲಿ ತಲುಪಬೇಕಾದಲ್ಲಿ ತಲುಪುವುದಿಲ್ಲವೆಂದು ಎಐಐಎಂಎಸ್‌ನ ಹೃದಯ ಮತ್ತು ರಕ್ತನಾಳ ಶಸ್ತ್ರ ಚಿಕಿತ್ಸಾ ಪ್ರೊಫೆಸರ್ ಬಲರಾಮ್ ಆಯ್ರನ್ ತಿಳಿಸಿದ್ದಾರೆ.

1994ರ ಆ.3ರಂದು ಎಐಐಎಂಎಸ್‌ನಲ್ಲಿ ದೇಶದ ಮೊದಲ ಹೃದಯ ಕಸಿ ನಡೆಸಿದ ತಂಡದಲ್ಲಿ ಅವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News