ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ ಸುಶ್ಮಾ

Update: 2016-09-29 14:39 GMT

ಹೊಸದಿಲ್ಲಿ, ಸೆ.29: ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಸೇನೆಯು ನಿಯಂತ್ರಣ ರೇಖೆಯಾಚೆ ಕೈಗೊಂಡ ಮಿತ ಸೇನಾ ಕಾರ್ಯಾಚರಣೆಯ ಬಗ್ಗೆ ವಿವರಿಸಿದ್ದಾರೆ.

ಅದಕ್ಕಿಂತ ಮೊದಲು ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ ಸೋನಿಯಾರನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸಹ ಭೇಟಿಯಾಗಿದ್ದರು. ಆ.2ರಂದು ವಾರಣಾಸಿಯಲ್ಲಿ ರೋಡ್‌ಶೊ ಒಂದರ ವೇಳೆ ಸೋನಿಯಾ ಅನಾರೋಗ್ಯಕ್ಕೆ ಈಡಾಗಿದ್ದರು.

ನಿಯಂತ್ರಣ ರೇಖೆಯಾಚೆಗಿನ ಭಯೋತ್ಪಾಕರ ನೆಲೆಗಳ ಮೇಲೆ ಸೇನೆಯು ದಾಳಿ ನಡೆಸುವ ಮೂಲಕ ‘ಪ್ರಬಲ ಸಂದೇಶವನ್ನು’ ರವಾನಿಸಿದೆ ಎಂದು ಹೇಳಿಕೆಯೊಂದನ್ನು ನೀಡಿರುವ ಅವರು, ಭಾರತದಲ್ಲಿ ನಡೆಯುತ್ತಿರುವ ಗಡಿಯಾಚೆಗಿನ ದಾಳಿಗಳ ‘ದೊಡ್ಡ ಹೊಣೆ’ ಪಾಕಿಸ್ತಾನದ ಮೇಲಿದೆ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಪ್ರಮುಖ ರಾಜಕೀಯ ನಾಯಕರಿಗೆ ಪರಿಸ್ಥಿತಿಯನ್ನು ವಿವರಿಸುವುದಕ್ಕಾಗಿ ಸರ್ವ ಪಕ್ಷ ಸಭೆಯೊಂದನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News