×
Ad

ಅನಧಿಕೃತ ಸಂಪತ್ತು ಹೊಂದಿದ್ದ ಮಾಜಿ ಸೇನಾಧಿಕಾರಿಗೆ ಶಿಕ್ಷೆ

Update: 2016-09-29 20:14 IST

ಹೊಸದಿಲ್ಲಿ, ಸೆ.29:. ರೂ. 2 ಕೋಟಿಗೂ ಹೆಚ್ಚು ಅನಧಿಕೃತ ಸಂಪತ್ತು ಶೇಖರಿಸಿದ 2007ರ ಪ್ರಕರಣವೊಂದರಲ್ಲಿ ಭೂಸೇನೆಯ ಮಾಜಿ ಹಿರಿಯಧಿಕಾರಿಯೊಬ್ಬರಿಗೆ ಇಂದು ವಿಶೇಷ ನ್ಯಾಯಾಲಯವೊಂದು ಒಂದು ವರ್ಷದ ಕಾರಾಗೃಹ ಶಿಕ್ಷೆ ವಿಧಿಸಿದೆ.

ಜೈಪುರದ ನೈಋತ್ಯ ಕಮಾಂಡ್‌ನ ಮಾಜಿ ಮೇಜರ್ ಜನರಲ್ ಆನಂದಕುಮಾರ್ ಕಪೂರ್ ಎಂಬವರು ಅಪರಾಧಿಯಾಗಿದ್ದು, ಅವರಿಗೆ ವಿಶೇಷ ಸಿಬಿಐ ನ್ಯಾಯಾಧೀಶ ವಿನೋದ್‌ಕುಮಾರ್ ರೂ.50 ಸಾವಿರ ದಂಡವನ್ನು ವಿಧಿಸಿದ್ದಾರೆ.

ಪ್ರಕರಣದ ಸಂಬಂಧ 2007ರ ಅ.8ರಂದು ಸಿಬಿಐ ಎಫ್‌ಐಆರ್ ದಾಖಲಿಸಿ, ಅ.10ರಂದು ಆನಂದ್‌ರ ಸೈನಿಕ್ ಫಾರ್ಮ್ ಹಾಗೂ ಇತರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

1971ರ ನ.14ರಿಂದ 2006ರ ಮೇ 31ರ ವರೆಗೆ ಸಾರ್ವಜನಿಕ ಸೇವಕನಾಗಿ ಸೇನೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ವೇಳೆ ಆನಂದ್, ತನ್ನ ಅಥವಾ ಕುಟುಂಬ ಸದಸ್ಯರ ಹೆಸರಿನಲ್ಲಿ ಭ್ರಷ್ಟ ಹಾಗೂ ಕಾನೂನು ಬಾಹಿರ ವಿಧಾನಗಳಿಂದ ಭಾರೀ ಆಸ್ತಿ ಸಂಗ್ರಹಿಸಿದ್ದರೆಂದು ಸಿಬಿಐ ಆರೋಪಿಸಿತ್ತು.

ಸೆ.27ರಂದು ಕಪೂರ್‌ರನ್ನು ದೋಷಿಯೆಂದು ಘೋಷಿಸಿದ್ದ ನ್ಯಾಯಾಲಯ ಅವರ ಪತ್ನಿ ಮೃದುಲಾರನ್ನು ದೋಷಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News