ಭಾರತ - ಪಾಕ್ ಉದ್ವಿಗ್ನತೆ ಬಗ್ಗೆ ಹೇಳಿಕೆ ನೀಡಿದ : ಬಾಂಗ್ಲಾ
Update: 2016-09-29 23:18 IST
ಢಾಕಾ, ಸೆ. 29: ತನ್ನ ಸಾರ್ವಭೌಮತೆ ಮತ್ತು ಭೂಭಾಗದ ಮೇಲೆ ನಡೆಯುವ ಯಾವುದೇ ದಾಳಿಗೆ ಪ್ರತಿಕ್ರಿಯಿಸುವ ‘‘ಕಾನೂನುಬದ್ಧ ಹಾಗೂ ಜಾಗತಿಕವಾಗಿ ಸ್ವೀಕೃತವಾದ’’ ಹಕ್ಕು ಭಾರತಕ್ಕಿದೆ ಎಂದು ಬಾಂಗ್ಲಾದೇಶ ಗುರುವಾರ ಹೇಳಿದೆ.
ಅದೇ ವೇಳೆ, ಸಂಬಂಧಪಟ್ಟ ಎಲ್ಲ ದೇಶಗಳು ಸಂಯಮವನ್ನು ತೋರಿಸಬೇಕು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ಸಲಹಾಕಾರ ಇಕ್ಬಾಲ್ ಚೌಧರಿ ಹೇಳಿದರು.
ಕಾಶ್ಮೀರ ವಿವಾದದ ಬಗ್ಗೆ ಮಾತನಾಡಿದ ಅವರು, ಅದೊಂದು ದ್ವಿಪಕ್ಷೀಯ ವಿವಾದವಾಗಿದ್ದು, ಇನ್ನೊಂದು ಕಡೆಯಿಂದ ಉಲ್ಲಂಘನೆಯಾಗಿದೆ ಎಂದು ಹೇಳಿದರು.