ಇಂದು ಸಚಿವ ರೈ ಪ್ರವಾಸ
Update: 2016-09-29 23:31 IST
ಮಂಗಳೂರು, ಸೆ.29: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೆ.30 ಮತ್ತು ಅ.1ರಂದು ದ.ಕ. ಜಿಲ್ಲಾ ಪ್ರವಾಸದಲ್ಲಿರುವರು. ಸೆ.30ರಂದು ಬೆಳಗ್ಗೆ 9ಕ್ಕೆ ಮುಡಿಪು ಸೂರಜ್ ಪಪೂ ಕಾಲೇಜಿನಲ್ಲಿ ನಡೆಯುವ ಜಿಲ್ಲಾ ಪಪೂ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟ ಉದ್ಘಾಟನೆ, 10ಕ್ಕೆ ಪಾಣೆಮಂಗಳೂರಿನ ಆಲಡ್ಕ ಉಪ್ಪುಗುಡ್ಡೆಯಲ್ಲಿ ನಿರ್ಮಿತ ಮೆಟ್ಟಿಲು ಉದ್ಘಾಟನೆ ಸಮಾರಂಭ, 11ಕ್ಕೆ ಮಂಗಳೂರು ಎನ್‌ಜಿಒ ಹಾಲ್‌ನಲ್ಲಿ ನಡೆಯುವ ಕರ್ನಾಟಕ ಗ್ರಾಪಂ ನೌಕರರ ಸಂಘದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವರು.
ಅ.1ರಂದು ಪೂರ್ವಾಹ್ನ 10ಕ್ಕೆ ಜಿಪಂ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ನಾಗರಿಕ ದಿನಾಚರಣೆ ಉದ್ಘಾಟನೆ, 11ಕ್ಕೆ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಮದ್ಯವರ್ಜಿತರ ಸಮಾವೇಶ, ಅಪರಾಹ್ನ 2ಕ್ಕೆ ಬಾಳ್ತಿಲದ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ.ಮೂಡ ಪಪೂ ಕಾಲೇಜು ವತಿಯಿಂದ ನಡೆಯುವ ಎನ್ನೆಸ್ಸೆಸ್ ಶಿಬಿರದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.