×
Ad

ಯೋಧನ ಸೆರೆ ಒಪ್ಪಿಕೊಂಡ ಭಾರತೀಯ ಸೇನೆ

Update: 2016-09-29 23:57 IST

ಹೊಸದಿಲ್ಲಿ, ಸೆ.29:  ಭಾರತೀಯ ಯೋಧನೊಬ್ಬ ಪಾಕಿಸ್ತಾನ ಸೇನೆಯ ವಶದಲ್ಲಿರುವುದನ್ನು ಭಾರತೀಯ ಸೇನೆ ಒಪ್ಪಿಕೊಂಡಿದೆ.

ಆದರೆ ಆತ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಯೋಧನಲ್ಲ, ಆಕಸ್ಮಿಕವಾಗಿ ಗಡಿ ದಾಟಿದ ಸಂದರ್ಭದಲ್ಲಿ ಆತ ಪಾಕಿಸ್ತಾನದ ಯೋಧರಿಗೆ ಸೆರೆ ಸಿಕ್ಕಿದ್ದಾನೆ ಎಂದು ಸೇನೆ ಸ್ಪಷ್ಟಪಡಿಸಿದೆ.

37 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿರುವ ಯೋಧನ ಹೆಸರು ಚಂದೂ ಬಾಬೂಲಾಲ್ ಎನ್ನುವುದನ್ನೂ ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತದ 8 ಯೋಧರು ಮೃತಪಟ್ಟಿದ್ದಾರೆ ಎನ್ನುವ ಹೇಳಿಕೆಯನ್ನು ಸೇನೆ ಸ್ಪಷ್ಟವಾಗಿ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News